ಸಾಗರ : ಶ್ರೀಮತಿ ಸುಶೀಲಾ ಆರ್. ಶೆಟ್ಟಿಗಾರ್ ಇವರು ನೂತನವಾಗಿ ನಿರ್ಮಿಸಿರುವ ‘ಶ್ರೀ ಚೌಡೇಶ್ವರಿ ಪ್ರಸಾದತ್’ ಗೃಹಪ್ರವೇಶದ ಅಂಗವಾಗಿ ‘ಯಕ್ಷ-ಗಾನ-ವೈಭವ’ ಕಾರ್ಯಕ್ರಮವನ್ನು ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ 11-30 ಗಂಟೆಗೆ ಸಾಗರ ಸೊರಬ ರಸ್ತೆ ಗಮಗಶ್ರೀ ಹೊಟೇಲ್ ಹತ್ತಿರ, ಟೀಚರ್ ಲೇಔಟ್ ಎದುರು ಬಸವೇಶ್ವರ ನಗರದಲ್ಲಿ ಆಯೋಜಿಸಲಾಗಿದೆ.
ಚಿನ್ಮಯ ಭಟ್ ಕಲ್ಲಡ್ಕ, ದಿನೇಶ್ ಶೆಟ್ಟಿ ಬೆಪ್ಡೆ, ಶಾಲಿನಿ ಹೆಬ್ಬಾರ್, ಕೌಶಲ್ ರಾವ್ ಪುತ್ತಿಗೆ, ಶ್ರೀಧರ ವಿಟ್ಲ, ನಿಶ್ವತ್ಥ್ ಜೋಗಿ, ಸುನಿಲ ಭಂಡಾರಿ ಮತ್ತು ಸುಜಾನ್ ಹಾಲಾಡಿ ಇವರುಗಳು ಭಾಗವಹಿಸಲಿದ್ದಾರೆ.

