ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ತನ್ನ 61ನೇ ವರ್ಷದಲ್ಲಿ ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ 46ನೇ ‘ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ -2025’ಯನ್ನು ದಿನಾಂಕ 23 ನವೆಂಬರ್ 2025ರಿಂದ 04 ಡಿಸೆಂಬರ್ 2025ರವರೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿ ಮುದ್ದಣ ಮಂಟಪದಲ್ಲಿ ನಡೆಸಲಿದೆ.
ದಿನಾಂಕ 23 ನವೆಂಬರ್ 2025ರಂದು ಈ ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಇವರು ನಿರ್ವಹಿಸಲಿದ್ದು, ರಂಗಭೂಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4-00 ಗಂಟೆಗೆ ರಂಗಭೂಮಿ ಕಲಾವಿದರಿಂದ ‘ಸಂಗೀತ ಸೌರಭ’ ಪ್ರಸ್ತುತಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಸ್ಪರ್ಧೆಯ ಮೊದಲ ದಿನದ ನಾಟಕ ಭಾನುಪ್ರಕಾಶ್ ಎಸ್.ವಿ. ಇವರ ನಿರ್ದೇಶನದಲ್ಲಿ ತುಮಕೂರಿನ ಗುಬ್ಬಿ ವೀರಣ್ಣ ಶಿಕ್ಷಣ ಕಲಾ ತಂಡದವರಿಂದ ‘ಗೌತಮ ಬುದ್ಧ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 24 ನವೆಂಬರ್ 2025ರಂದು ಭಾಷ್ ರಾಘವೇಂದ್ರ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಅಂತರಂಗ ಬಹಿರಂಗ ತಂಡದವರಿಂದ ‘ಅನುಗ್ರಹ’, ದಿನಾಂಕ 25 ನವೆಂಬರ್ 2025ರಂದು ಮಹೇಶ್ ದತ್ತಾನಿ ಇವರ ನಿರ್ದೇಶನದಲ್ಲಿ ಉಡುಪಿಯ ಪುನಃ ಥಿಯೇಟರ್ ತಂಡದವರಿಂದ ‘ಯೋಗಿ ಮತ್ತು ಭೋಗಿ’, ದಿನಾಂಕ 26 ನವೆಂಬರ್ 2025ರಂದು ಸಾಗರ್ ಎಸ್. ಗುಂಬಳ್ಳಿ ಇವರ ನಿರ್ದೇಶನದಲ್ಲಿ ಮೈಸೂರಿನ ನೇಪಥ್ಯ ರಂಗತಂಡದವರಿಂದ ‘ಒಡಲಾಳ’, ದಿನಾಂಕ 27 ನವೆಂಬರ್ 2025ರಂದು ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಉಡುಪಿ ಕೊಡವೂರು ಸುಮನಸಾ ತಂಡದವರಿಂದ ‘ಈದಿ’, ದಿನಾಂಕ 28 ನವೆಂಬರ್ 2025ರಂದು ಚಿತ್ರಶೇಖರ್ ಎನ್.ಎಸ್. ಇವರ ನಿರ್ದೇಶನದಲ್ಲಿ ಬೆಂಗಳೂರಿನ ಸಂಚಯ ತಂಡದವರಿಂದ ‘ವಿಶ್ವಾಮಿತ್ರ ಮೇನಕೆ Dance ಮಾಡೋದು ಏನಕೆ ? Ask Mr. YNK’, ದಿನಾಂಕ 29 ನವೆಂಬರ್ 2025ರಂದು ಗಣೇಶ್ ಮಂದಾರ್ತಿ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಕ್ರಾನಿಕಲ್ಸ್ ಆಫ್ ಇಂಡಿಯಾ ತಂಡದವರಿಂದ ‘ಶಿವೋಹಂ’, ದಿನಾಂಕ 30 ನವೆಂಬರ್ 2025ರಂದು ರಾಜೇಂದ್ರ ಕಾರಂತ ನಿರ್ದೇಶನದಲ್ಲಿ ಬೆಂಗಳೂರಿನ ನಮ್ದೆ ನಟನೆ ತಂಡದವರಿಂದ ‘ಮಗಳೆಂಬ ಮಲ್ಲಿಗೆ’, ದಿನಾಂಕ 01 ಡಿಸೆಂಬರ್ 2025ರಂದು ಪುನೀತ್ ಎ.ಎಸ್. ಇವರ ನಿರ್ದೇಶನದಲ್ಲಿ ಬೆಂಗಳೂರಿನ ನೆನಪು ಕಲ್ಚರಲ್ ಅಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ತಂಡದವರಿಂದ ‘ಮಾಯಾದ್ವೀಪ’, ದಿನಾಂಕ 02 ಡಿಸೆಂಬರ್ 2025ರಂದು ಹುಲುಗಪ್ಪ ಕಟ್ಟೀಮನಿ ಇವರ ನಿರ್ದೇಶನದಲ್ಲಿ ತೀರ್ಥಹಳ್ಳಿಯ ನಟಮಿತ್ರರು ಹವ್ಯಾಸಿ ಕಲಾ ಸಂಘ ತಂಡದವರಿಂದ ‘ಆ ಊರು ಈ ಊರು’, ದಿನಾಂಕ 03 ಡಿಸೆಂಬರ್ 2025ರಂದು ಮಂಜುನಾಥ ಎಲ್. ಬಡಿಗೇರ ಇವರ ನಿರ್ದೇಶನದಲ್ಲಿ ಸಾಗರದ ಸ್ಪಂದನ ತಂಡದವರಿಂದ ‘ಪ್ರಾಣಪದ್ಮಿನಿ’, ದಿನಾಂಕ 04 ಡಿಸೆಂಬರ್ 2025ರಂದು ನಂದಕುಮಾರ್ ಅನ್ನಕ್ಕನವರ್ ಇವರ ನಿರ್ದೇಶನದಲ್ಲಿ ಬೆಂಗಳೂರಿನ ರೇವಾ ರಂಗ ಅಧ್ಯಯನ ಕೇಂದ್ರದ ತಂಡದವರಿಂದ ‘ದರ್ಶನಂ’ ನಾಟಕ ಪ್ರಸ್ತುತಗೊಳ್ಳಲಿದೆ.

