ಸಾಗರ : ನಾಟ್ಯಶ್ರೀ ಕಲಾತಂಡ (ರಿ.) ಶಿವಮೊಗ್ಗ, ಶ್ರೀ ಗುರು ಯಕ್ಷಗಾನ ಮಂಡಲಿ ಸಾಗರ, ವಿದ್ವಾನ್ ದತ್ತಮೂರ್ತಿ ಭಟ್ ಸಂಘಟನೆಯಲ್ಲಿ ‘ಯಕ್ಷ ಷಡಾಖ್ಯಾನಮ್’ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಸಾಗರ ಎಲ್.ಬಿ. ಕಾಲೇಜ್ ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
‘ದುಷ್ಯಂತ ಶಾಕುಂತಲಾ’, ‘ಅದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಮಹಾತ್ಮೆ’, ‘ದ್ರುಪದ ಗರ್ವಭಂಗ’, ‘ಲವ ಕುಶ’, ‘ರಾಜ ಉಗ್ರಸೇನ’, ‘ಚಕ್ರವ್ಯೂಹ’ ಪ್ರಸಂಗದ ಯಕ್ಷಗಾನ ಪ್ರದರ್ಶನವು ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ.


