ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಪ್ರಸ್ತುತ ಪಡಿಸುವ ‘ಅಪ್ಪ’ ಅರೆಭಾಷೆ ನಾಟಕ ಪ್ರದರ್ಶನವನ್ನು ದಿನಾಂಕ 27 ನವೆಂಬರ್ 2025ರಂದು ಸಂಜೆ 5-00 ಗಂಟೆಗೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಲೋಕೇಶ್ ಊರುಬೈಲ್ ಇವರು ರಚಿಸಿ ನಿರ್ದೇಶನ ಮಾಡಿರುವ ಈ ನಾಟಕಕ್ಕೆ ಮಹೇಶ್ ಆಚಾರಿ ಹೊನ್ನಾವರ ವಿನ್ಯಾಸ ಮತ್ತು ರೋಹಿತ್ ಮಲ್ಪೆ ಮತ್ತು ದಿವಾಕರ್ ಕಟೀಲ್ ಸಂಗೀತ ನೀಡಿರುತ್ತಾರೆ. ರಾಜ್ ಮುಖೇಶ್, ವಿನೋದ್ ಮೂಡಗದ್ದೆ, ಶಶಿಕಾಂತ್ ಮಿರ್ತ್ತೂ, ಪ್ರಸನ್ನ ಅಚ್ಚಿಪಳ್ಳ, ಚೈತನ್ ಬೊಳ್ಳೂರು, ಸುನಿಲ್ ಅಜ್ಜಾವರ, ಯುವರಾಜ್ ಬಾಳೆಗುಡ್ಡೆ, ತಿರುಮಲೇಶ್ವರಿ ಅರ್ಬಡ್ಕ, ಪ್ರಾಪ್ತಿ ಆಲಂಕಲ್ಯ, ಅರ್ಪಿತಾ ಚೊಕ್ಕಾಡಿ, ಮೌರ್ಯ ನಾರ್ಕೋಡು, ಸುನಂದಾ ಶೆಟ್ಟಿ, ಗ್ರೀಷ್ಮ ಕೇದ್ಕಾರ್, ಗೌತಮ್ ಎಂ.ಬಿ., ಗೌತಮಿ ಬಂಗಾರ್ ಕೊಡಿ, ಕೆ.ಟಿ. ಭಾಗೇಶ್, ಚಂದ್ರಶೇಖರ ಪೇರಾಲ್, ನಿತ್ಯಾನಂದ ಮಲೆಯಾಳ, ಸೌಮ್ಯ ಆಲಂಕಲ್ಯ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ.

