ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದಿಂದ ಸುರತ್ಕಲ್ ಹೋಬಳಿ ಘಟಕದ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 11 ಡಿಸೆಂಬರ್ 2025ರಂದು ಕಾಟಿಪಳ್ಳ ನಾರಾಯಣ ಗುರು ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ.
ಹೋಬಳಿ ಮಟ್ಟದ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೀತಾ ಸುರತ್ಕಲ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶೀನಾಥ ತಿಳಿಸಿದ್ದಾರೆ. ಹೋಬಳಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಸಂಸ್ಥೆಯ ಅಧ್ಯಕ್ಷ ಪಿ. ದಯಾಕರ್ ನೇತೃತ್ವದಲ್ಲಿ ನಾರಾಯಣಗುರು ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಸಾಹಿತ್ಯ ಸಮ್ಮೇಳನದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.
ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿ. ದಯಾಕರ್, ಆಡಳಿತಾಧಿಕಾರಿ ಡಾ. ಗಣೇಶ್ ಅಮೀನ್ ಸಂಕಮಾರ್, ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಗುಣವತಿ ರಮೇಶ್, ಗೋವಿಂದದಾಸ ಪದವಿ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಕೃಷ್ಣಮೂರ್ತಿ, ಕೋಶಾಧಿಕಾರಿ ಅನುರಾಧ ರಾಜೀವ್, ಕಾರ್ಯದರ್ಶಿ ಅಕ್ಷತಾ, ಸಂಸ್ಥೆಯ ಪ್ರಿನ್ಸಿಪಾಲ್ ಧರ್ಮಪಾಲ್, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುರೇಖಾ ಚಿದಾನಂದ್, ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಹಾವೀರ್ ಜೈನ್ ಉಪಸ್ಥಿತರಿದ್ದರು.
ನಾಟಕ ರಂಗಶಂಕರ ನಿರ್ಮಿಸಿ, ಅಂತಾರಾಷ್ಟ್ರೀಯ ಖ್ಯಾತಿಯ ಮೋಹಿತ್ ತಾಕಲ್ಕರ್ ನಿರ್ದೇಶಿಸಿದ ‘ಬೀದಿಯೊಳಗೊಂದು ಮನೆಯ ಮಾಡಿ…’ ಮುಂಬೈಯ ವಸಯಿ ಕನ್ನಡ ಸಂಘದ ‘ಪ್ರತಿಷ್ಟಿತ ರಂಗಕರ್ಮಿ’ ಎನ್ನುವ ಪ್ರಶಸ್ತಿ, ಮುಂಬೈ ಕನ್ನಡ ಸಂಘದ ‘ಸ್ವರ್ಣ ಮಯೂರ’ ಪ್ರಶಸ್ತಿ, ಬೆಂಗಳೂರಿನ ರಂಗನಿರಂತರ, ಭಾರತ ಯಾತ್ರಾ ಕೇಂದ್ರ ಹಾಗೂ ನಾಕುತಂತಿ ಪ್ರಕಾಶನದ ಸಂಯೋಗದಿಂದ ‘ಕಾರ್ಮಿಕ ರಂಗ ಪ್ರಶಸ್ತಿ’ ಇವರಿಗೆ ಲಭಿಸಿವೆ. 2021ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಇವರಿಗೆ ಸಂದಿದೆ.
ಅನನ್ಯ ಕಾಸರವಳ್ಳಿ ನಿರ್ದೇಶನದ ‘ಕಪ್ಪು ಕಲ್ಲಿನ ಶೈತಾನ’ ಅಂತಾರಾಷ್ಟ್ರೀಯವಾಗಿ 12 ಪ್ರಶಸ್ತಿಗಳನ್ನು ಗೆದ್ದಿತು. ಅನನ್ಯ ಕಾಸರವಳ್ಳಿ ನಿರ್ದೇಶಿತ ಮತ್ತೊಂದು ಸಿನಿಮಾ ‘ಹರಿಕಥಾ ಪ್ರಸಂಗ’ದಲ್ಲಿ ನಟಿಸುವುದರೊಂದಿಗೆ ಗೀತಾ ವಸ್ತ್ರವಿನ್ಯಾಸವನ್ನೂ ಮಾಡಿದ್ದಾರೆ. 01 ಮಾರ್ಚ್ 2024ರಿಂದ ಆರಂಭವಾಗುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶಿತವಾಗಲಿರುವ ‘ಅಬ್ರಕದಬ್ರ’ ನಿರ್ದೇಶನ ಉಡುಪಿಯ ಶಿಶಿರ್ ರಾಜಗೋಪಾಲ್ ಸಿನಿಮಾದಲ್ಲೂ ಇವರು ನಟಿಸಿ, ವಸ್ತ್ರ ವಿನ್ಯಾಸ ಮಾಡಿದ್ದಾರೆ. ಉತ್ತಮ ಕಥಾವಸ್ತುಗಳಿದ್ದು ಪ್ರಬುದ್ಧ ಯುವನಿರ್ದೇಶಕರುಗಳು ನಿರ್ದೇಶಿಸಿದ ‘ಏಕಮ್ ವೆಬ್ ಸೀರೀಸ್’ ಓಟಿಟಿ ಪ್ರದರ್ಶನದ ಸರತಿಯಲ್ಲಿದೆ. ಇತ್ತೀಚೆಗೆ ಸಿನಿಮಾ ನಿರ್ಮಾಣಕ್ಕೂ ಕೈಹಾಕಿರುವ ಗೀತಾ ಸುರತ್ಕಲ್ ಸಹನಿರ್ಮಾಪಕರೊಂದಿಗೆ ಸೇರಿ ನಿರ್ಮಿಸಿರುವ ‘ಅಮ್ಮಚ್ಚಿಯೆಂಬ ನೆನಪು’ ಮತ್ತು ‘ಕೋಳಿ ಎಸ್ರು’ ಸಿನಿಮಾಗಳು ನೋಡುಗರ ಹಾಗೂ ವಿಮರ್ಶಕರ ಮುಕ್ತಕಂಠದ ಪ್ರಶಂಸೆಗೆ ಭಾಜನವಾಗುವುದರ ಜೊತೆಗೆ ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿವೆ. ಚಾರಣ ಮತ್ತು ಪುಸ್ತಕ ಓದುವುದು ಇವರಿಗೆ ಪ್ರೀತಿಯ ವಿಷಯಗಳು. ಕೊನೆಗೂ ಗೀತಾಗೆ ಹೃದಯಕ್ಕೆ ಹತ್ತಿರವಾಗುವ ವಿಷಯ ರಂಗಭೂಮಿಯೇ.
