ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಕ್ಷ ರಂಗಾಯಣ ಕಾರ್ಕಳ ಇವರ ಸಹಯೋಗದಲ್ಲಿ ‘ನಾಟಕೋತ್ಸವ’ವನ್ನು ದಿನಾಂಕ 26, 27 ಮತ್ತು 28 ನವೆಂಬರ್ 2025ರಂದು ಪ್ರತೀ ದಿನ ಸಂಜೆ 6-30 ಗಂಟೆಗೆ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಕಳ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರು ದಿನಾಂಕ 26 ನವೆಂಬರ್ 2025ರಂದು ಬಿ.ಆರ್. ವೆಂಕಟರಮಣ ಐತಾಳ ಇವರ ನಿರ್ದೇಶನದಲ್ಲಿ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’, ದಿನಾಂಕ 27 ನವೆಂಬರ್ 2025ರಂದು ಗಣೇಶ್ ಮಂದಾರ್ತಿ ಇವರ ನಿರ್ದೇಶನದಲ್ಲಿ ‘ಸೋಮಿಯ ಸೌಭಾಗ್ಯ’ ಮತ್ತು ದಿನಾಂಕ 28 ನವೆಂಬರ್ 2025ರಂದು ಶ್ರೀಕಾಂತ್ ಎನ್.ವಿ. ಇವರ ನಿರ್ದೇಶನದಲ್ಲಿ ‘ಮಹಾತ್ಮರ ಬರವಿಗಾಗಿ’ ನಾಟಕಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

