ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ಆಶ್ರಯದಲ್ಲಿ ಭಾರತೀಯ ವಿದ್ಯಾಭವನ ಮಂಗಳೂರು ಮತ್ತು ರಾಮಕೃಷ್ಣ ಮಠದ ಸಹಯೋಗದಲ್ಲಿ ದಿನಾಂಕ 28ರಿಂದ 30 ನವೆಂಬರ್ 2025ರವರೆಗೆ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ‘ಮಂಗಳೂರು ಸಂಗೀತೋತ್ಸವ’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 28 ನವೆಂಬರ್ 2025ರಂದು ಸಂಜೆ 5-00 ಗಂಟೆಗೆ ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಉದ್ಘಾಟಿಸುವರು. ಸಂಜೆ 5-15ರಿಂದ ಎಸ್.ಕೆ. ಮಹತಿ ವಡೋದರ ಇವರು ಹಾಡುಗಾರಿಕೆ ನಡೆಸಲಿದ್ದಾರೆ. ದಿನಾಂಕ 29 ನವೆಂಬರ್ 2025ರಂದು ಸಂಜೆ 5-00 ಗಂಟೆಗೆ ಜಿ.ಎನ್. ಕೃಷ್ಣಪವನ್ ಕುಮಾರ್ ಇವರಿಂದ ವೇಣುವಾದನ ನಡೆಯಲಿದೆ. ದಿನಾಂಕ 30 ನವೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಚೆನ್ನೈಯ ಜನಪ್ರಿಯ ಕಲಾವಿದ ಸಿಕ್ಕಿಲ್ ಗುರುಚರಣ್ ಹಾಡುಗಾರಿಕೆ ಪ್ರಸ್ತುತಪಡಿಸಲಿದ್ದಾರೆ. ಅಪರಾಹ್ನ 2-00 ಗಂಟೆಯಿಂದ ಕುಮಾರಿ ತನ್ಮಯೀ ಉಪ್ಪಂಗಳ ಇವರ ಹಾಡುಗಾರಿಕೆ ನಡೆಯಲಿದೆ. ಸಮಾರೋಪ ಸಭೆಯು ಸಂಜೆ 4-00 ಗಂಟೆಗೆ ನಡೆಯಲಿದ್ದು, ಬಳಿಕ ಸಂಜೆ 5-30ಕ್ಕೆ ತಿರುವನಂತಪುರದ ಎಸ್.ಆರ್. ಮಹಾದೇವ ಶರ್ಮ ಮತ್ತು ಎಸ್.ಆರ್. ರಾಜಶ್ರೀ ಇವರು ದ್ವಂದ್ವ ಪಿಟೀಲು ವಾದನ ನಡೆಸಿಕೊಡಲಿದ್ದಾರೆ. ‘ಸಂಗೀತೋತ್ಸವ 2025 ಪ್ರಶಸ್ತಿ’ಯನ್ನು ಕಾಸರಗೋಡಿನ ಮೃದಂಗ ವಿದ್ವಾಂಸ ಪುರುಷೋತ್ತಮ ಪುಣಿಂಚತಾಯ ಇವರಿಗೆ ಮತ್ತು ‘ಯುವ ಪ್ರತಿಭಾ ಪ್ರಶಸ್ತಿ’ಯನ್ನು ಕುಮಾರಿ ಧನಶ್ರೀ ಶಬರಾಯ ಹಾಗೂ ಕಾರ್ತಿಕ್ ಭಟ್ ಇನ್ನಂಜೆ ಇವರಿಗೆ ಪ್ರದಾನ ಮಾಡಲಾಗುವುದು.

