ಶಿಶಿರ ಶಿಕ್ಷಕ ಶಿಕ್ಷಣ ರಂಗ ಮಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಕನ್ನಡ ವಿಭಾಗ, ತುಳು ಎಂ. ಎ. ಹಳೆ ವಿದ್ಯಾರ್ಥಿ ಸಂಘ, ಇವುಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ “ತುಳುಪರ್ಬ ಸಂಭ್ರಮೊ ವಿಚಾರಗೋಷ್ಠಿ ಬೊಕ್ಕ ಕವಿ ಗೋಷ್ಠಿ”.
ಶಿಶಿರ ಶಿಕ್ಷಕ ಶಿಕ್ಷಣ ರಂಗ ಮಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಕನ್ನಡ ವಿಭಾಗ ಮತ್ತು ತುಳು ಎಂ. ಎ. ಹಳೆ ವಿದ್ಯಾರ್ಥಿ ಸಂಘ ಇವುಗಳ ಜಂಟಿ ಆಶಯದಲ್ಲಿ “ತುಳುಪರ್ಬ ಸಂಭ್ರಮೋ” ವಿಚಾರಗೋಷ್ಠಿ ಬೊಕ್ಕ ಕವಿಗೋಷ್ಠಿ ಕಾರ್ಯಕ್ರಮವು 5 ಡಿಸೆಂಬರ್ 2025 ರಂದು ಪೂರ್ವಾನ್ನ 9.30ಕ್ಕೆ ಮಂಗಳೂರಿನ ಹಂಪನ್ಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪೂರ್ವಾನ್ನ 10 ಗಂಟೆಗೆ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಡಾ. ಯು. ಟಿ. ಖಾದರ್ ಉದ್ಘಾಟಿಸಲಿರುವರು. ಶಿಶಿರ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಸುಭಾಷ್ಚಂದ್ರ ಕಣ್ವತೀರ್ಥ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಲಿದೆ.
ಡಾ. ಜ್ಯೋತಿ ಚೇಳಾಯ್ರು, ಡಾ. ತುಕರಾಮ್ ಪೂಜಾರಿ ಮತ್ತು ಡಾ. ದಿನಕರ ಪಂಚನಾಡಿ ಸಂಪನ್ಮೂಲ ವ್ಯಕ್ತಿಗಳಾಗಿ ನಡೆಸಿಕೊಡುವ ವಿಚಾರಗೋಷ್ಠಿಯು 11 ಗಂಟೆಯಿಂದ 01 ಗಂಟೆವರೆಗೆ ನಡೆಯಲಿದೆ. ಇದೇ ವೇದಿಕೆಯಲ್ಲಿ 2 ಗಂಟೆಯಿಂದ 4 ಗಂಟೆಯವರೆಗೆ ತುಳು ಭಾಷಾ ಕವಿಗೋಷ್ಟಿಯು ನಡೆಯಲಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ. ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀ ಮುದ್ದು ಮೂಡುಬೆಳ್ಳೆಯವರು ನಿರ್ವಹಿಸುವರು.
ಸಾಯಂಕಾಲ 4 ಗಂಟೆಯಿಂದ 4:30 ರವರೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಡಾ. ಧನಂಜಯ ಕುಂಬ್ಳೆ ಸಮಾರೋಪ ಭಾಷಣ ಮಾಡಲಿದ್ದಾರೆ.

