ಮಂಗಳೂರು : ಸನಾತನ ನಾಟ್ಯಾಲಯ ಇವರು ಪ್ರಸ್ತುತ ಪಡಿಸುವ ‘ವಂದೇ ಗುರುಪರಂಪರಾಮ್’ ಕಾರ್ಯಕ್ರಮವನ್ನು ದಿನಾಂಕ 29 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಗುರು ಪರಂಪರೆ ಮುಂದುವರಿಸುತ್ತಿರುವ ಶಿಷ್ಯ ಬಳಗದವರಿಂದ ಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರಿಗೆ ಗುರು ನಮನ – ನೃತ್ಯ ನಮನ ಪ್ರಸ್ತುತಗೊಳ್ಳಲಿದೆ.
ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ್ ಕುಮಾರ್ ಇವರ ಗೌರವ್ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ವಿದ್ವಾನ್ ಮಂಜುನಾಥ್ ಪುತ್ತೂರು ನಟುವಾಂಗ, ವಿನೀತ್ ಪುರುವಾಂಕರ ಹಾಡುಗಾರಿಕೆ, ಗೀತೇಶ್ ನೀಲೇಶ್ವರ ಮೃದಂಗ, ಉಡುಪಿಯ ಮುರಳೀಧರ್ ಕೆ. ಕೊಳಲಿನಲ್ಲಿ ಸಹಕರಿಸಲಿದ್ದು, ಡಾ. ಶೋಭಿತಾ ಸತೀಶ್ ನಿರೂಪಣೆ ಮಾಡಲಿದ್ದಾರೆ.


