ಮೈಸೂರು : ಮಂಗಳೂರು ಕೊಲ್ಯದ ಶ್ರೀ ನಾಟ್ಯನಿಕೇತನದ ನೃತ್ಯ ಗುರು ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ ಹಾಗೂ ಸನಾತನ ನಾಟ್ಯಾಲಯದ ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರು ದಿನಾಂಕ 24 ನವೆಂಬರ್ 2025ರಂದು ಮೈಸೂರಿನ ವಸುಂಧರಾ ಭವನದಲ್ಲಿ ಯುಗಳ ಭರತನಾಟ್ಯ ಪ್ರದರ್ಶನವನ್ನು ನೀಡಿದರು.


ಮೈಸೂರಿನ ನೃತ್ಯಗುರು ವಸುಂಧರಾ ದೊರೆಸ್ವಾಮಿ ಆಯೋಜಿಸಿದ ವಸುಂಧರೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಶ್ರೀಲತಾ ನಾಗರಾಜ್, ಗಾಯನ ವಿನೀತ್ ಪೂರವಂಕರ, ಮೃದಂಗ ವಿಕ್ರಂ ಭಾರದ್ವಾಜ್, ಕೊಳಲು ವಾದನ ಸಮೃದ್ಧ ಶ್ರೀನಿವಾಸನ್ ಸಹಕರಿಸಿದ್ದರು.


