ಕಾರ್ಕಳ : ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಡಮಾಡಲ್ಪಡುವ ಕುಕ್ಕುಂದೂರು ಗಣಿತ ನಗರದ ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ನೀಡಲಾಗುವ ದಿ. ಪ್ರೊ. ಎನ್. ರಾಮಚಂದ್ರ ಸ್ಮರಣೆಯ ಉಡುಪಿ ಜಿಲ್ಲೆಯ ‘ಉತ್ತಮ ಯುವ ಸಾಹಿತಿ ಪ್ರಶಸ್ತಿ’ ಹಾಗೂ ದಿ. ಗೋಪಾಲ ಭಂಡಾರಿ ಇವರ ಸ್ಮರಣಾರ್ಥ ಕನ್ನಡ ಕಾಯಕದಲ್ಲಿ ತೊಡಿಸಿಕೊಂಡ ಉತ್ತಮ ಸಂಘ ಸಂಸ್ಥೆಗೆ ನೀಡುವ ಪ್ರಶಸ್ತಿಗೆ ಅರ್ಹದಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಶಾಶ್ವತ ಫಲಕವನ್ನು ಒಳಗೊಂಡಿದೆ.
ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಅರ್ಜಿಯನ್ನು ದೇವದಾಸ್ ಕೆರೆಮನೆ, ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ, ಕೇರಾಫ್ ‘ವಂದ್ಯುಕ್ತ’ ನಿಸರ್ಗನಗರ, ಶ್ಯಾಮಲಾ ಕಾಂಪೌಂಡ್, ಮಿಯ್ಯಾರು, ಮುಡಾರು, ಬಜಗೋಳಿ ಅಂಚೆ, ಕಾರ್ಕಳ -574122 ದೂರವಾಣಿ : 91 6360686393 ಈ ವಿಳಾಸಕ್ಕೆ ದಿನಾಂಕ 10 ಡಿಸೆಂಬರ್ 2025ರ ಒಳಗೆ ತಲುಪುವಂತೆ ಕಳುಹಿಸಿಕೊಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ತಿಳಿಸಿದೆ.
