ಬೆಂಗಳೂರು : ಕಲಾವಿಲಾಸಿ ಪ್ರಸ್ತುತ ಪಡಿಸುವ ‘ಎಷ್ಟು ಕಾಡತಾವ ಕಬ್ಬಕ್ಕೀ’ ನಾಟಕ ಪ್ರದರ್ಶನವನ್ನು ದಿನಾಂಕ 03 ಡಿಸೆಂಬರ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಜೆ.ಸಿ. ನಗರದ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಬಸವರಾಜ ಎಮ್ಟಿಯವರ ರಂಗ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಪ್ರಸ್ತುತಗೊಳ್ಳುವ ಈ ನಾಟಕದಲ್ಲಿ ಬೆಳಗಾವಿ ಭಾಗದ ಗ್ರಾಮೀಣ ಪರಿಸರದ ಗಾಢ ಅನುಭವಗಳನ್ನು ಕೊಡುವಂತಹ, ರಾಘವೇಂದ್ರ ಪಾಟೀಲರ ಕೆಲವು ಕತೆಗಳನ್ನು ರಂಗದ ಮೇಲೆ ತರಲಾಗಿದೆ.

