ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 4-00 ಗಂಟೆಗೆ ‘ಕಾವ್ಯಾಂ ವ್ಹಾಳೊ-9’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಅಕಾಡೆಮಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ವಹಿಸಿಕೊಳ್ಳಲಿದ್ದು, ಇನ್ಫೆಂಟ್ ಜೀಸಸ್ ಶ್ರೈನ್ನ ನಿರ್ದೇಶಕರಾದ ಫಾ. ಸ್ಟೀವನ್ ಆಲ್ವಿನ್ ಪಿರೇರಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಖ್ಯಾತ ಕವಿಗಳಾದ ಶ್ರೀ ಆ್ಯಂಡ್ರು ಎಲ್. ಡಿಕುನ್ಹಾರವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ವಿನ್ಸೆಂಟ್ ಪಿಂಟೊ ಆಂಜೆಲೊರ್, ಕೃತಿಕಾ ಕಾಮತ್, ರೇಮಂಡ್ ಡಿಕುನ್ಹಾ, ಎಲ್ಸನ್ ಡಿಕೋಸ್ತ ಹಿರ್ಗಾನ್, ಸೋನಿಯಾ ಡಿಕೋಸ್ತ, ಲವೀನ ದಾಂತಿ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸುವರು. ಏಂಜಲ್ ಕುಟಿನ್ಹಾ, ರಿಷೊನ್ ನಜ್ರೆತ್, ಆನ್ಯ ದಾಂತಿ, ಸ್ಟ್ಯಾನಿ ಆಲ್ವಾರಿಸ್- ಇವರು ದಿ. ಚಾ. ಪ್ರಾ. ಡಿಕೋಸ್ತರವರ ಕವಿತೆಗಳನ್ನು ವಾಚಿಸಲಿದ್ದಾರೆ.
