ಉಜಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇವರ ಸಹಯೋಗದಲ್ಲಿ ಶ್ರೀಮತಿ ವನಜಾ ಜೋಶಿ ಇವರ ‘ನಕ್ಕು ಬಿಡು ಬಾನಕ್ಕಿ’ ಗಜಲ್ ಸಂಕಲನ ಬಿಡುಗಡೆ ಮತ್ತು ಗಜಲ್ ರಚನಾ ಕಾರ್ಯಾಗಾರವನ್ನು ದಿನಾಂಕ 06 ಡಿಸೆಂಬರ್ 2025ರಂದು ಮುಂಜಾನೆ 9-30 ಗಂಟೆಗೆ ಉಜಿರೆ ಎಸ್.ಡಿ.ಎಮ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರು ವಹಿಸಲಿದ್ದು, ಉಜಿರೆ ಎಸ್.ಡಿ.ಎಮ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಂತೋಷ್ ಆಲ್ಬರ್ಟ್ ಸಲ್ಡಾನಾ ಇವರು ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ಶ್ರೀಮತಿ ಸುಮನಾ ಆರ್. ಹೇರ್ಳೆ ಇವರು ಪುಸ್ತಕ ಪರಿಚಯ ಮಾಡಲಿದ್ದು, ಲೇಖಕಿ ವನಜಾ ಜೋಶಿ ಇವರು ಕೃತಿ ಬಗ್ಗೆ ಅನಿಸಿಕೆಗಳನ್ನಾಡಲಿದ್ದಾರೆ. ಗಜಲ್ ಕವಿ ಡಾ. ಮಲ್ಲಿನಾಥ ಎಸ್. ತಳವಾರ ಇವರು ಗಜಲ್ ರಚನಾ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.

