ಶಿವಮೊಗ್ಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗಾಯಣ ಶಿವಮೊಗ್ಗ ಇವರ ಜಂಟಿ ಆಶ್ರಯದಲ್ಲಿ ರಂಗಾಯಣ ಶಿವಮೊಗ್ಗದ ರೆಪರ್ಟರಿ ಕಲಾವಿದರು ಅಭಿನಯಿಸುವ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನವನ್ನು ದಿನಾಂಕ 05 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಶಿವಮೊಗ್ಗದ ರಂಗಾಯಣ ಸುವರ್ಣ ಸಂಸ್ಕೃತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಡಿ.ಎಸ್. ಚೌಗಲೆ ಇವರು ರಚಿಸಿರುವ ಈ ನಾಟಕವನ್ನು ಚಿದಂಬರ ರಾವ್ ಜಂಬೆ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.

