ಶಿವಮೊಗ್ಗ : ಛಾಯಾಗ್ರಹಣ ತರಬೇತಿ ಕ್ಷೇತ್ರದಲ್ಲಿ 25 ವರ್ಷಗಳಿಂದ ಕಾರ್ಯನಿರತವಾಗಿರುವ ಸಾಗರ ಪಟ್ಟಣದ ಸಾಗರ ಫೋಟೋಗ್ರಫಿಕ್ ಸೊಸೈಟಿಯು ಹೆಗ್ಗೋಡಿನ ನೀನಾಸಂ ಸಂಸ್ಥೆಯ ಸಹಯೋಗದಲ್ಲಿ ಹೆಗ್ಗೋಡಿನಲ್ಲಿ ದಿನಾಂಕ 25ರಿಂದ 28 ಡಿಸೆಂಬರ್ 2025ರವರೆಗೆ ರಾಜ್ಯ ಮಟ್ಟದ ಛಾಯಾಗ್ರಹಣ ಕಾರ್ಯಾಗಾರ ಆಯೋಜಿಸಿದೆ.
ಹಿರಿಯ ಛಾಯಾಗ್ರಹಣ ಪರಿಣತರು ಈ ಶಿಬಿರದಲ್ಲಿ ಉಪನ್ಯಾಸ ನೀಡಲಿದ್ದು, ಛಾಯಾಗ್ರಹಣ ಕಲೆಯ ಕುರಿತು ವ್ಯಾಪಕವಾದ ತರಬೇತಿ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಶುಲ್ಕ ರಿಯಾಯಿತಿ ಇದೆ. ಸೀಮಿತ ವಸತಿಯ ಅವಕಾಶದ ಕಾರಣದಿಂದಾಗಿ ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಸೊಸೈಟಿಯ ಸಹ ಕಾರ್ಯದರ್ಶಿ ಜಿ.ಆರ್ . ಪಂಡಿತ್ ತಿಳಿಸಿದ್ದಾರೆ. ಫೋಟೋಗ್ರಫಿಯಲ್ಲಿ ಆಸಕ್ತಿಯುಳ್ಳವರು ಮೊಬೈಲ್ ನಂ. 94486 27878ಗೆ ಸಂಪರ್ಕಿಸಬಹುದು.

