ಉಡುಪಿ : ಕನ್ನಡದ ಡಿಜಿಟಲ್ ಯುಗಕ್ಕೆ ಕೀಲಿಮಣೆ ಮೂಲಕ ಹೊಸ ದಾರಿ ತೋರಿದ ಕಂಪ್ಯೂಟರ್ ಕೀಲಿಮಣೆ ವಿನ್ಯಾಸಗಾರ ಪ್ರೊ. ಕೆ.ಪಿ. ರಾವ್ ಇವರನ್ನು ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಆಯ್ಕೆ ಸಮಿತಿ ವಿದ್ವಾಂಸರಾದ ಎಚ್.ವಿ. ನಾಗರಾಜ ರಾವ್, ಉಮಾಕಾಂತ ಭಟ್, ಮಲ್ಲೇಪುರಂ ಜಿ. ವೆಂಕಟೇಶ್ ಸರ್ವಾನುಮತದ ಆಯ್ಕೆಯನ್ನು ಸೂಚಿಸಿದ್ದಾರೆ ಎಂದು ಟ್ರಸ್ಟ್ ವಿಶ್ವಸ್ಥೆ ವೀಣಾ ಬನ್ನಂಜೆ ತಿಳಿಸಿದ್ದಾರೆ.
ಬನ್ನಂಜೆ ಗೋವಿಂದಾಚಾರ್ಯರ ಪುಣ್ಯ ಸ್ಮರಣೆಯ ಪ್ರಯುಕ್ತ ದಿನಾಂಕ 13 ಡಿಸೆಂಬರ್ 2025ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಪುರಸ್ಕಾರ ಗೌರವ ಫಲಕ, ಪ್ರಶಸ್ತಿ ಪತ್ರ ಮತ್ತು 25,000 ಗೌರವ ಧನ ಸಹಿತವಾಗಿ ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದರು ಪ್ರದಾನ ಮಾಡುವರು. ಯುವ ವಿದ್ವಾಂಸ ವಿನಯ ವಾರಣಾಸಿ ಇವರು ‘ಗೋವಿಂದ ನಾಮ ಜಿಜ್ಞಾಸೆ’ ವಿಷಯವಾಗಿ ಉಪನ್ಯಾಸ ನೀಡುವರು.
