ಮೈಸೂರು : ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ.) ಆಯೋಜಿಸುವ ‘ನೆನಪಿನಂಗಳ’ ರಂಗಭೂಮಿಯ ನೆನ್ನೆ ನಾಳೆಗಳ ನಡುವೆ ಸಂವಾದ ಕಾರ್ಯಕ್ರಮವನ್ನು ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಮೈಸೂರಿನ ಶ್ರೀರಂಗ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂಗಳದಲ್ಲಿ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಇವರು ಭಾಗವಹಿಸಲಿದ್ದಾರೆ.

