ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬೆಳ್ತಂಗಡಿ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಆಡಳಿತ ಸಮಿತಿ ಸಹಯೋಗದೊಂದಿಗೆ ದಿನಾಂಕ 20 ಡಿಸೆಂಬರ್ 2025ರಂದು ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ಆಯೋಜಿಸಿದೆ.
ತಾಲೂಕು ಮಟ್ಟದ ಸ್ಪರ್ಧೆ ದಿನಾಂಕ 11 ಡಿಸೆಂಬರ್ 2025ರಂದು ನಡೆಯಲಿದ್ದು, ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದ ತಂಡಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಜಿಲ್ಲಾಮಟ್ಟದ ಸ್ಪರ್ಧೆ ವಿಜೇತ ತಂಡಗಳಿಗೆ ರೂ.10,000/-, ರೂ.7,000/- ಮತ್ತು ರೂ.5,000/- ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ಹಾಗೂ ತಾಲೂಕು ಮಟ್ಟದ ವಿಜೇತ ತಂಡಗಳಿಗೆ ರೂ.3,000/- ಮತ್ತು ರೂ.2000/- ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ನಗದು ಬಹುಮಾನ ನಿಗದಿಪಡಿಸಲಾಗಿದೆ.
ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ತಂಡಗಳಿಗೆ ರೂ.2,000/- ಮತ್ತು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ರೂ.1,000/- ಪ್ರಯಾಣ ಭತ್ಯೆ ಹಾಗೂ ಎಲ್ಲ ಕಲಾವಿದರಿಗೆ ಆಕಾಡೆಮಿ ವತಿಯಿಂದ ಪ್ರಮಾಣಪತ್ರ ನೀಡಲಾಗುವುದು. ಆಸಕ್ತರು ದಿನಾಂಕ 08 ಡಿಸೆಂಬರ್ 2025ರ ಒಳಗಾಗಿ ತಾಲೂಕು ಮಟ್ಟದ ಸ್ಪರ್ಧೆಗಳ ಹೆಸರು ನೋಂದಣಿಗೆ ಆಯಾ ತಾಲೂಕು ಪ್ರತಿನಿಧಿಗಳನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.
