ಮೈಸೂರು : ಸಮತೆಂತೋ ಮೈಸೂರು ಇದರ ವತಿಯಿಂದ ‘ಸಮತೆಂತೋ ರಂಗ ಸಂಭ್ರಮ’ವನ್ನು ದಿನಾಂಕ 12ರಿಂದ 14 ಡಿಸೆಂಬರ್ 2025ರವೆರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 12 ಡಿಸೆಂಬರ್ 2025ರಂದು ರಂಗ ಸಂಗೀತ ಪ್ರಸ್ತುತಿ, ಎಚ್.ಎಸ್. ಉಮೇಶ್ ಇವರ ನಿರ್ದೇಶನದಲ್ಲಿ ‘ಗುರಿ ಮುಟ್ಟು’ ನಾಟಕ ಪ್ರದರ್ಶನ, ದಿನಾಂಕ 13 ಡಿಸೆಂಬರ್ 2025ರಂದು ಜೋಸೆಫ್ ಜಾನ್ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಕ್ರಿಯೇಟಿವ್ ರಂಗ ತಂಡ ಪ್ರಸ್ತುತ ಪಡಿಸುವ ‘ಗುಂಡಾಯಣ’ ನಾಟಕ, ದಿನಾಂಕ 14 ಡಿಸೆಂಬರ್ 2025ರಂದು ಎಚ್.ಎಸ್. ಉಮೇಶ್ ಇವರ ನಿರ್ದೇಶನದಲ್ಲಿ ‘ದುಡ್ಡಿನ ದೇವರು’ ನಾಟಕ ಪ್ರದರ್ಶನ ನಡೆಯಲಿದೆ.

