ಬೆಂಗಳೂರು : ದೃಶ್ಯ (ರಿ.) ರಂಗತಂಡ ಪ್ರಯೋಗಿಸುತ್ತಿರುವ ದಾಕ್ಷಾಯಿಣಿ ಭಟ್ ಎ. ಇವರ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ರಕ್ತ ಧ್ವಜ’ ನಾಟಕ ಪ್ರದರ್ಶನವನ್ನು ದಿನಾಂಕ 14 ಡಿಸೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವು ಬಸವರಾಜ್ ಕಟ್ಟೀಮನಿಯವರ ‘ರಕ್ತ ಧ್ವಜ’ ಕತೆ ಹಾಗೂ ಆರ್. ಬಸವರಾಜ್ ರ ‘ಈಸೂರಿನ ಚಿರಂಜೀವಿಗಳು’ ಕಾದಂಬರಿ ಆಧಾರಿತ ಕಥೆಯಾಗಿದೆ.

