ಮೈಸೂರು : ರಂಗಸಂಪದ ಬೆಂಗಳೂರು ಇದರ ಸುವರ್ಣ ಸಂಭ್ರಮದ ಪ್ರಯುಕ್ತ ಪ್ರಸ್ತುತ ಪಡಿಸುವ ನಾಟಕ ಪ್ರದರ್ಶನವನ್ನು ದಿನಾಂಕ 13 ಮತ್ತು 14 ಡಿಸೆಂಬರ್ 2025ರಂದು ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 13 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೇಲೂರು ರಘುನಂದನ್ ರಚಿಸಿರುವ ಚಿದಂಬರರಾವ್ ಜಂಬೆ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಉಮಾಶ್ರೀ ಅಭಿನಯಿಸುವ ‘ಶರ್ಮಿಷ್ಠೆ’ ನಾಟಕದ 25ನೇ ಪ್ರದರ್ಶನ ನಡೆಯಲಿದೆ.
ದಿನಾಂಕ 14 ಡಿಸೆಂಬರ್ 2025ರಂದು ಮಧ್ಯಾಹ್ನ 3-00 ಮತ್ತು ಸಂಜೆ 6-30 ಗಂಟೆಗೆ ವಿನಯ್ ಶಾಸ್ತ್ರಿ ನಿರ್ದೇಶನದಲ್ಲಿ ‘ನೀ ನಾನಾದ್ರೆ ನಾ ನೀನೇನಾ’ ಕನ್ನಡ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

