ಸಾಣೇಹಳ್ಳಿ : ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ 2025-26ನೆಯ ಸಾಲಿನ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆಯ ನಾಟಕ ಪ್ರಯೋಗವನ್ನು ದಿನಾಂಕ 16 ಮತ್ತು 17 ಡಿಸೆಂಬರ್ 2025ರಂದು ಪ್ರತಿದಿನ ಸಂಜೆ 7-00 ಗಂಟೆಗೆ ಸಾಣೇಹಳ್ಳಿಯ ಹುಣಸೆ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ರಾಘು ಪುರಪ್ಪೇಮನೆ ಇವರ ನಿರ್ದೇಶನ ಮತ್ತು ಸಂಗೀತ ಭಿಡೆ ಇವರ ಸಹ ನಿರ್ದೇಶನದಲ್ಲಿ ಕೀರ್ತಿನಾಥ ಕುರ್ತಕೋಟಿ ಇವರ ‘ಆ ಮನಿ’ ನಾಟಕ ಪ್ರದರ್ಶನಗೊಳ್ಳಲಿದೆ.

