ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರಿಂದ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಮಾಸಿಕ ತಾಳಮದ್ದಲೆ ಪಾರ್ತಿಸುಬ್ಬ ವಿರಚಿತ ‘ವಾಲಿಮೋಕ್ಷ’ ಪ್ರಸಂಗದೊಂದಿಗೆ ದಿನಾಂಕ 16 ಡಿಸೆಂಬರ್ 2025ರ ಮಂಗಳವಾರ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ನಿತೀಶ ಕುಮಾರ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪಿ.ಟಿ. ಜಯರಾಮ ಭಟ್, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಕೋಡಿಬೖಲು, ಅನೀಶ್ ಕೃಷ್ಣ ಪುಣಚ ಭಾಗವಹಿಸಿದರು. ಶ್ರೀರಾಮನಾಗಿ ಭಾಸ್ಕರ ಶೆಟ್ಟಿ ಸಾಲ್ಮರ ಮತ್ತು ಭಾಸ್ಕರ ಬಾರ್ಯ, ವಾಲಿಯಾಗಿ ಗುಡ್ಡಪ್ಪ ಬಲ್ಯ, ಸುಗ್ರೀವನಾಗಿ ಮಾಂಬಾಡಿ ವೇಣುಗೋಪಾಲ ಭಟ್ ಮತ್ತು ತಾರೆಯ ಪಾತ್ರದಲ್ಲಿ ಲಕ್ಷ್ಮೀ ಕಾಂತ ಹೆಗ್ಡೆ ಪಾತ್ರಪೋಷಣೆ ಮಾಡಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಡೆಕ್ಕಿಲ ಚಂದ್ರಶೇಖರ ಭಟ್ ಪ್ರಾಯೋಜಿಸಿದರು. ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.
