ಬೆಂಗಳೂರು : ನಾಟಕ ಬೆಂಗ್ಳೂರ್ -26ರ ರಂಗಸಂಭ್ರಮದ ಪ್ರಯುಕ್ತ ‘ಅನೇಕ ಬೆಂಗಳೂರು’ ಅಭಿನಯಿಸುವ ‘ಲೈಟ್ಸ್ ಆಫ್’ ನಾಟಕ ಪ್ರದರ್ಶನವನ್ನು ದಿನಾಂಕ 19 ಡಿಸೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಪೀಟರ್ ಷಾಫರ್ ಇವರ ಈ ನಾಟಕವನ್ನು ಸುರೇಶ್ ಆನಗಳ್ಳಿಯವರು ಕನ್ನಡ ರೂಪ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಶಮಂತ್ ಹತ್ವಾರ್, ಮುರುಳಿ ಪೂರ್ವಿಕ್, ರಿತಿ ಶೆಟ್ಟಿ, ಸಿಂಧೂ ಹಂದೆ, ಪ್ರವೀಣ್ ಬಂಗೇರ್, ಪವನ್ ಜಿ.ಎನ್., ಗೃಹಿತ, ರಕ್ಷಿತ್ ಹೆಚ್.ವಿ. ರಂಗದ ಮೇಲೆ ಅಭಿನಯಿಸಲಿದ್ದಾರೆ.

