ಧಾರವಾಡ : ಅನುಷ್ಕಾ ಪ್ರಕಾಶನ ಧಾರವಾಡ, ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಧಾರವಾಡ ಇವರ ಸಹಯೋಗದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 26 ಡಿಸೆಂಬರ್ 2025ರಂದು ಅಪರಾಹ್ನ 3-30 ಗಂಟೆಗೆ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಪ್ರೊ. ಶಶಿಧರ ತೋಡಕಲ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರೊ. ರಾಘವೇಂದ್ರ ಪಾಟೀಲ ಇವರು ಪುಸ್ತಕ ಬಿಡುಗಡೆ ಮಾಡಿ ಆಶಯ ನುಡಿಗಳನ್ನಾಡಲಿದ್ದಾರೆ. ಪ್ರೊ. ಆರುಂಧತಿ ಸವದತ್ತಿ, ಡಾ. ಅನಿತಾ ಗುಡಿ ಮತ್ತು ಲಿಂಗರಾಜ ಸೊಟ್ಟಪ್ಪನವರ ಇವರುಗಳು ಕೃತಿ ಪರಿಚಯ ಮಾಡಲಿದ್ದಾರೆ. ‘ಕಣ್ಮಂಚಿನ ತಾರೆ’, ‘ಮಾಲತಿ ಪಟ್ಟಣಶೆಟ್ಟಿ’, ‘ಕಾಡುಸಂಪಿಗೆ’ ಮತ್ತು ‘ಜೀವ ಸಂವಾದ’ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ.



