ಮೈಸೂರು : ಸುಗಮ ಸಂಗೀತ ಅಕಾಡೆಮಿ ಅರ್ಪಿಸುವ ‘ಮಿಶ್ರ ಮಾಧುರ್ಯ’ ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮವನ್ನು ದಿನಾಂಕ 20 ಡಿಸೆಂಬರ್ 2025ರಂದು ಸಂಜೆ 6-00 ಗಂಟೆಗೆ ಮೈಸೂರು ಜೆ.ಎಲ್.ಬಿ. ರಸ್ತೆಯಲ್ಲಿರುವ ಸಂಗೀತ ಕಲಾನಿಧಿ ಮೈಸೂರು ವಾಸುದೇವಾಚಾರ್ಯ ಭವನ ನಾದ ಬ್ರಹ್ಮ ಸಂಗೀತ ಸಭಾದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಇದರ ಅಧ್ಯಕ್ಷರಾದ ಕೆ. ನಾಗರಾಜು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಂಶಿ ಪ್ರನ್ನಕುಮಾರ್ ಮತ್ತು ರಾಮಮೂರ್ತಿ ರಾವ್ ಇವರನ್ನು ಸನ್ಮಾನಿಸಲಾಗುವುದು. ನಿತಿನ್ ರಾಜಾರಾಂ ಶಾಸ್ತ್ರಿ ಮತ್ತು ಶ್ರೀದೇವಿ ಮಂಜುನಾಥ್ ಇವರ ಹಾಡುಗಾರಿಕೆಗೆ ಸಮೀರ್ ರಾವ್, ಪುರುಷೋತ್ತಮ ಕಿರಗಸೂರು, ವೇದಶ್ರೀ ಸಿ.ಎಸ್., ಆತ್ಮಾರಾಂ ನಾಯಕ್ ಇವರುಗಳು ವಾದ್ಯ ಸಹಕಾರ ನೀಡಲಿದ್ದಾರೆ.

