ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕವಿಗಳಿಂದ ಕೊಡವ ಕವನ ಆಹ್ವಾನಿಸಿದೆ. ಸುಮಾರು 50 ಕವಿಗಳ ಒಂದೊಂದು ಕವನಗಳನ್ನು ಸೇರಿಸಿ ಹೊರತರಲು ಉದ್ದೇಶಿಸಿರುವ ಕೊಡವ ಕವನ ಸಂಕಲನಕ್ಕೆ ಸ್ವರಚಿತ ಕವನಗಳನ್ನು ಕಳುಹಿಸಲು ಬಯಸುವ ಕವಿಗಳು ತಮ್ಮ ಭಾವಚಿತ್ರದೊಂದಿಗೆ ದಿನಾಂಕ 31 ಡಿಸೆಂಬರ್ 2025ರೊಳಗೆ ನೋಂದಣಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಮ್ಯಾನ್ಸ್ ಕಾಂಪೌಂಡ್ ಹತ್ತಿರ, ಸ್ಕೌಟ್ಸ್ ಮತ್ತು ಗೈಡ್ಸ್ ಭವನ, ಮಡಿಕೇರಿ ಈ ವಿಳಾಸಕ್ಕೆ ಕಳುಹಿಸುವುದು.
ಕವಿಗಳು ಕಡ್ಡಾಯವಾಗಿ ಒಂದೊಂದು ಕವನಗಳನ್ನು ಮಾತ್ರ ಕಳುಹಿಸತಕ್ಕದ್ದು, ಒಂದಕ್ಕಿಂತ ಹೆಚ್ಚಿನ ಕವನಗಳನ್ನು ಕಳುಹಿಸಿದರೆ ಆಯ್ಕೆಗೆ ಪರಿಗಣಿಸುವುದಿಲ್ಲ. ಕವನವು ಯಾವುದೇ ಕಾರಣಕ್ಕೆ 20 ಗೆರೆ ಮೀರಬಾರದು. ಅಂತೆಯೇ ಪ್ರತೀ ಗೆರೆಗಳಲ್ಲಿ ಐದಕ್ಕಿಂತ ಹೆಚ್ಚಿನ ಶಬ್ದಗಳಿರುವಂತಿಲ್ಲ. ನಾಡು, ನುಡಿ, ಪರಿಸರ, ಪರಿಸ್ಥಿತಿ, ಸಂಸ್ಕೃತಿಗೆ ಸಂಬಂಧಪಟ್ಟ ಕವನಗಳಿಗೆ ಆದ್ಯತೆ ನೀಡುವುದು ಉತ್ತಮ ಎಂದು ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯನವರು ತಿಳಿಸಿದ್ದಾರೆ. ಆಯ್ಕೆಯಾಗುವ ಕವನಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಕಚೇರಿ ಮೊಬೈಲ್ ಸಂಖ್ಯೆ 8762942976ನ್ನು ಸಂಪರ್ಕಿಸಬಹುದು.
