ಬೆಂಗಳೂರು : ಶ್ರೀ ರಾಮಸೇವಾ ಮಂಡಲಿ ಟ್ರಸ್ಟ್ (ರಿ.) ಇದರ ವತಿಯಿಂದ ಎಸ್.ವಿ. ನಾರಾಯಣಸ್ವಾಮಿ ರಾವ್ ಇವರ ಜನ್ಮ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 21 ಡಿಸೆಂಬರ್ 2025ರಂದು ಬೆಳಿಗ್ಗೆ 9-30 ಗಂಟೆಗೆ ಬೆಂಗಳೂರು ನೆಟ್ಟಿಗೆರೆ ಗ್ರಾಮದ ಕನಕಪುರ ರಸ್ತೆಯಲ್ಲಿರುವ ಎಸ್.ವಿ.ಎನ್. ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 9-30 ಗಂಟೆಗೆ ವಿದ್ವಾನ್ ಚಂದ್ರಮೌಲಿ ರಾವ್ ಮತ್ತು ವಿದುಷಿ ಮಾಳವಿಕಾ ರಾವ್ ಇವರ ಹಾಡುಗಾರಿಕೆಗೆ ವಿದ್ವಾನ್ ಮಧುಸೂದನ್ ಭಟ್ ಹಾರ್ಮೋನಿಯಂ ಮತ್ತು ವಿದ್ವಾನ್ ವಿಶ್ವಾಸ್ ಸಾಗರ್ ತಬಲಾ ಸಾಥ್ ನೀಡಲಿದ್ದಾರೆ. ಗಂಟೆ 11-15ಕ್ಕೆ ವಿವಿಧ ಕ್ಷೇತ್ರದ ಸಾಧಕರಿಗೆ ಎಸ್.ವಿ.ಎನ್. ಸ್ಮಾರಕ ಜೀವಮಾನ ಸಾಧನೆ ಪ್ರಶಸ್ತಿ 2025 ಪ್ರದಾನ ಹಾಗೂ ಶ್ರೀದೇವಿ ರವೀಂದ್ರ ದತ್ತಿನಿಧಿ ಸಂಗೀತ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದೆ. 12-20 ಗಂಟೆಗೆ ಎಸ್.ಎ.ಪಿ.ಎ. ಇದರ ವಿದ್ಯಾರ್ಥಿಗಳಿಂದ ವಯೋಲಿನ್ ವಾದನ ಪ್ರಸ್ತುತಗೊಳ್ಳಲಿದೆ.

