ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಶಿವಮೊಗ್ಗ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಇದರ ವತಿಯಿಂದ 244ನೇ ‘ಸಾಹಿತ್ಯ ಹುಣ್ಣಿಮೆ’ ಹಾಡು ಹಾಸ್ಯ ಕಥೆ ಕವನ ಹನಿಗವನ ವಿಚಾರ ತಿಂಗಳ ಕಾರ್ಯಕ್ರಮವನ್ನು ದಿನಾಂಕ 20 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಶಿವಮೊಗ್ಗದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಉಂಬ್ಳೇಬೈಲು ಮೋಹನ್ ಇವರು ಉದ್ಘಾಟನೆ ಮಾಡಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಭಜನಾ ಮಂಡಳಿಯವರಿಂದ ಭಜನೆ, ಶಿವಮೊಗ್ಗ ಕದಂಬ ಕರೋಕೆ ಗಾಯನ ತಂಡದವರಿಂದ ಹಾಡು, ಮೇಗರವಳ್ಳಿ ರಮೇಶ್, ಶ್ರೀನಿವಾಸ ಮತ್ತು ಶುಭ ಇವರಿಂದ ಕವನ ವಾಚನ, ಹು.ವ. ಸತೀಶ ಮತ್ತು ಶ್ರೀಮತಿ ಗಾಯತ್ರಿ ಇವರಿಂದ ಹನಿಗವನ ಹಾಗೂ ಕುಮಾರಿ ಸ್ಪಂದನಾ ಚರಂತಿಮಠ ಇವರಿಂದ ಕಥೆ ಪ್ರಸ್ತುತಗೊಳ್ಳಲಿದೆ.

