ಕೇರಳ : ಕರಾವಳಿಯ ಯುವ ಭರತನಾಟ್ಯ ಕಲಾವಿದರಾದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರು ಕೇರಳದ ಪುಲ್ಪಲ್ಲಿ ಎಂಬಲ್ಲಿ ದೇವ್ ದಕ್ಷ ಕಲಾಕ್ಷೇತ್ರ ನೃತ್ಯ ಸಂಸ್ಥೆಯು ದಿನಾಂಕ 24 ಡಿಸೆಂಬರ್ 2025ರಂದು ಬೆಳಗ್ಗೆ 8-30 ಗಂಟೆಗೆ ನಡೆಸುತ್ತಿರುವ ನೃತ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಗಾರವು ಮಂಜುನಾಥ್ ಇವರ 100ನೇಯ ಕಾರ್ಯಾಗಾರವಾಗಿದ್ದು, ನೃತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದ ಮೈಲುಗಲ್ಲು ಇದಾಗಿರುತ್ತದೆ ಎಂದು ದೇವ್ ದಕ್ಷ ನೃತ್ಯ ಕಲಾಕ್ಷೇತ್ರದ ಗುರುಗಳಾದ ಶ್ರೀಮತಿ ರೆಸ್ಮಿ ಶಬು ತಿಳಿಸಿರುತ್ತಾರೆ. ಜನವರಿ 3ರಂದು ನಡೆಯುವ ಪುಲ್ಪಲ್ಲಿ ಉತ್ಸವದ ದಿನ ಮಂಜುನಾಥ್ ನೃತ್ಯ ಪ್ರದರ್ಶನ ನೀಡಲಿದ್ದಾರೆ.


