ಬೆಂಗಳೂರು : ಕರಾವಳಿಯ ಯುವ ಭರತನಾಟ್ಯ ಕಲಾವಿದರಾದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರು ಬೆಂಗಳೂರಿನಲ್ಲಿ ದಿನಾಂಕ 25ರಿಂದ 27 ಡಿಸೆಂಬರ್ 2025ರವರೆಗೆ ಪ್ರತಿದಿನ 9-30 ಗಂಟೆಯಿಂದ 5-00 ಗಂಟೆ ತನಕ ಅರ್ಕ ಕಲಾ ಕುಟೀರ ನೃತ್ಯ ಸಂಸ್ಥೆಯು ನಡೆಸುತ್ತಿರುವ ತಾಳ ಪ್ರಕ್ರಿಯಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಾಗಾರವು ಮೂರು ದಿನಗಳ ಕಾಲ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಅರ್ಕ ಥೀಯೇಟರ್ ಮತ್ತು ಸಭಾಂಗಣದಲ್ಲಿ ಜರುಗಲಿದೆ ಎಂದು ಅರ್ಕ ಕಲಾ ಕುಟೀರದ ಗುರುಗಳಾದ ಶ್ರೀಮತಿ ಭಾನುಪ್ರಿಯ ರಾಕೇಶ್ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 8884173606 ಸಂಖ್ಯೆಯನ್ನು ಸಂಪರ್ಕಿಸಿರಿ.

