ಪೆರ್ಲ : ಸವಿ ಹೃದಯದ ಕವಿ ಮಿತ್ರರು ಪೆರ್ಲ ಇದರ ಆಶ್ರಯದಲ್ಲಿ ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿಯು ದಿನಾಂಕ 25 ಡಿಸೆಂಬರ್ 2025ರಂದು ಬೆಳಗ್ಗೆ 9-30 ಗಂಟೆಗೆ ಮಂಜೇಶ್ವರ ಗಿಳಿವಿಂಡುನಲ್ಲಿ ನಡೆಯಲಿದೆ.
ಬೆಳಗ್ಗೆ 9-30ಕ್ಕೆ ಆರಂಭಗೊಳ್ಳುವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉದ್ಘಾಟಿಸಲಿದ್ದು, ಸಾಹಿತಿ ಮಧುರಕಾನನ ಗಣಪತಿ ಭಟ್ ಅಧ್ಯಕ್ಷತೆ ವಹಿಸುವರು. ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಇದರ ಸಂಚಾಲಕ ಸುಭಾಷ್ ಪೆರ್ಲ ಇವರು ಪ್ರಸ್ತಾವನೆಗೈವರು. ವಿಶ್ರಾಂತ ಪ್ರಾಧ್ಯಾಪಕ ಡಾ. ಪ್ರಮೀಳಾ ಮಾಧವ್ ಕೃತಿ ಬಿಡುಗಡೆಗೊಳಿಸಲಿದ್ದು, ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಕೃತಿ ಪರಿಚಯ ಮಾಡುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ . ಸುಬ್ಬಯ್ಯಕಟ್ಟೆ ಗಿಳಿವಿಂಡು ಮಂಜೇಶ್ವರ ಇದರ ವ್ಯವಸ್ಥಾಪಕ ಉಮೇಶ್ ಸಾಲ್ಯಾನ್ ಅತಿಥಿಗಳಾಗಿರುವರು. ಬಳಿಕ ನಡೆಯುವ ಕವಿಗೋಷ್ಠಿಯಲ್ಲಿ ಶಿಕ್ಷಕಿ ಸುಶೀಲಾ ಪದ್ಯಾಣ ಇವರು ಅಧ್ಯಕ್ಷತೆ ವಹಿಸುವರು.

