ಬಿ.ಸಿ. ರೋಡ್ : ರಾರಾಸಂ ಫೌಂಡೇಶನ್ (ರಿ.) ಬಂಟ್ವಾಳ ಇದರ 15ನೇ ವರ್ಷದ ಸಾಂಸ್ಕೃತಿಕ ಕಲರವ ‘ರಾರಾ ಸಂಭ್ರಮ’ವನ್ನು ದಿನಾಂಕ 25 ಡಿಸೆಂಬರ್ 2025ರಂದು ಬೆಳಗ್ಗೆ 9-00 ಗಂಟೆಗೆ ಬಿ.ಸಿ. ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಬೆಳಗ್ಗೆ 10-00 ಗಂಟೆಗೆ ಮಾಜಿ ಸಚಿವರಾದ ಬಿ. ರಾಮನಾಥ ರೈ ಇವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭಾನ್ವಿತ ವಿದ್ಯಾರ್ಥಿ ‘ನಿನಾದ್ ಕೈರಂಗಳ’ ಇವರಿಗೆ ‘ರಾರಾಸಂ ಪುರಸ್ಕಾರ’ ಮತ್ತು ನಿವೃತ್ತ ಪ್ರಥಮ ದರ್ಜೆ ಸಹಾಯಕರಾದ ಪ್ರವೀಣ್ ಕುಮಾರ್ ದೋಟ ಇವರಿಗೆ ಗೌರವಾಭಿನಂದನೆ ನೀಡಿ ಸನ್ಮಾನಿಸಲಾಗುವುದು. ಬೆಳಗ್ಗೆ 9-00 ಗಂಟೆಗೆ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧೆಗಳಾದ ಸೆಲ್ಫಿ ವಿತ್ ನೇಚರ್, ಅದೃಷ್ಟ ಪುಟಾಣಿ, ಪೇಪರ್ ಕ್ರಾಫ್ಟ್, ಚಿತ್ರಕಲಾ, ರಂಗೋಲಿ, ಪುಟಾಣಿ ಪಂಟರ್, ಕವನ ವಾಚನ, ಕೂಪನ್ ಕಲರವ, ಸ್ಮರಣ ಶಕ್ತಿ, ಹೂವು ಜೋಡಣೆ, ಭಾಷಣ ಸ್ಪರ್ಧೆ, ಎದುರುಕತೆ, ವೈಯುಕ್ತಿಕ ಛದ್ಮವೇಷ ಸ್ಪರ್ಧೆ, ಸೂಪರ್ ಸಿಂಗರ್, ಡ್ಯಾನ್ಸ್ ಜೂನಿಯರ್ಸ್ ಮತ್ತು ಡ್ಯಾನ್ಸ್ ಧಮಾಕಾ ಸ್ಪರ್ಧೆಗಳನ್ನು ನಡೆಸಲಾಗುವುದು. ಸಂಜೆ 4-00 ಗಂಟೆಗೆ ಎಸ್.ಆರ್. ನಾಯಕ್ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

