ಪೊನ್ನಂಪೇಟೆ : ಕೊಡವ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿರುವ ‘ಕೊಡವ ತಕ್ಕ ಎಳ್ತ್’ಕಾರಡ ಕೂಟ’ವು ಯುವ ಪ್ರತಿಭೆಗಳು ಸೇರಿದಂತೆ ರಾಜ್ಯದ ಕೊಡವ ಭಾಷಾ ಕವಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ದಿನಾಂಕ 30 ಡಿಸೆಂಬರ್ 2025ರಂದು ವೀರಾಜಪೇಟೆಯಲ್ಲಿರುವ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ರಾಜ್ಯ ಮಟ್ಟದ ಕೊಡವ ಕವಿಗೋಷ್ಠಿ ಏರ್ಪಡಿಸಲಾಗಿದೆ.
ಪುತ್ರರಿ ಹಬ್ಬದ ಸವಿ ನೆನಪಿಗಾಗಿ ಆಯೋಜಿಸಿರುವ ಈ ಕವಿಗೋಷ್ಠಿಯಲ್ಲಿ ಜಾತಿ, ಧರ್ಮದ ಯಾವುದೇ ನಿರ್ಭಂದವಿಲ್ಲದೆ ಎಲ್ಲರೂ ಕೊಡವ ಭಾಷೆಯಲ್ಲಿ ಕವನ ಬರೆದು ಭಾಗವಹಿಸಬಹುದು. ಆಸಕ್ತಿ ಇರುವ ಕವಿಗಳು ದಿನಾಂಕ 25 ಡಿಸೆಂಬರ್ 2025ರಂದು ರಾತ್ರಿ 8-00 ಗಂಟೆಯ ಒಳಗೆ ಇದುವರೆಗೆ ಎಲ್ಲಿಯೂ ಪ್ರಕಟವಾಗದ ತಮ್ಮ ಸ್ವಂತ ರಚನೆಯ ಕೊಡವ ಕವನಗಳನ್ನು 98885 84732/ 94483 26014/ 94499 98789 ವಾಟ್ಸಪ್ ಸಂಖ್ಯೆಗಳಿಗೆ ಕಳುಹಿಸಬಹುದು ಅಥವಾ ಅಧ್ಯಕ್ಷರು, ಕೊಡವ ತಕ್ಕ ಎಳ್ತ್’ಕಾರಡ ಕೂಟ, ಕೇರಾಫ್ ಕರ್ನಾಟಕ ಒನ್ ಕಛೇರಿ, ಆತ್ರೇಯ ಆಸ್ಪತ್ರೆ ಎದುರು, ವೀರಾಜಪೇಟೆ ಈ ವಿಳಾಸಕ್ಕೆ ತಲುಪಿಸಬೇಕೆಂದು ಕೋರಲಾಗಿದೆ.
