ಉಡುಪಿ : ಅನಿಶ ಗಾನಕೂಟ ಉಡುಪಿ ಪ್ರಸ್ತುತ ಪಡಿಸುವ ‘ಶ್ರೀಕಾಂತ ಸೋಮಯಾಜಿ ಸಂಗೀತ ಮಾಲಿಕೆ’ ಕಾರ್ಯಕ್ರಮವನ್ನು ದಿನಾಂಕ 27 ಡಿಸೆಂಬರ್ 2025ರಂದು ಸೋಮಯಾಜಿಯವರ ಮನೆಯಲ್ಲಿ ಆಯೋಜಿಸಲಾಗಿದೆ.
ಸಂಜೆ 4-00 ಗಂಟೆಗೆ ಬೆಂಗಳೂರಿನ ಶ್ರೀಮತಿ ಸಿಂಚನಾ ಮೂರ್ತಿ ಮತ್ತು ತಂಡ ದವರಿಂದ ಭಕ್ತಿ ಭಾವ ಗಾನ ಸಿಂಚನ ಹಾಗೂ 6-00 ಗಂಟೆಗೆ ಸುವಿಕಾ ಕೋಟ ಇವರಿಂದ ಡಾ. ಶ್ರೀಪಾದ ಭಟ್ ಇವರ ನಿರ್ದೇಶನದಲ್ಲಿ ಕಾವ್ಯ ಹಂದೆ ಅಭಿನಯದ ‘ಹಕ್ಕಿ ಮತ್ತು ಅವಳು’ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಲಿದೆ.

