ಬೆಂಗಳೂರು : ಎನ್.ಎಸ್. ಕುಂಬಾರ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿರುವ ‘ಚಿತ್ರಕಾರ್’ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಪ್ರವೇಶಗಳನ್ನು ಆಹ್ವಾನಿಸಲಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲಾ ವಯೋಮಾನದವರಿಗೆ, ಹವ್ಯಾಸಿ ಹಾಗೂ ವೃತ್ತಿಪರರಿಗೆ ಪ್ರತ್ಯೇಕ ವಿಭಾಗಗಳಿವೆ. ಪ್ರತಿ ವಿಭಾಗಕ್ಕೂ ಪ್ರಶಸ್ತಿ ಹಾಗೂ ಪ್ರದರ್ಶನಗಳ ಅವಕಾಶವಿದ್ದು, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಅತ್ಯುತ್ತಮ ನೂರು ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಅವುಗಳಲ್ಲಿ 30 ಉತ್ತಮ ಚಿತ್ರಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ನೋಂದಣಿಗೆ https://nskumbar.art/category-chitrakar ಅಥವಾ 9663571101 ಸಂಪರ್ಕಿಸಬಹುದು. ನೋಂದಣಿಗೆ ಕಡೆಯ ದಿನಾಂಕ 31 ಡಿಸೆಂಬರ್ 2025.
