ಬೆಂಗಳೂರು : ಹೊಸವರ್ಷದ ಹೊಸ್ತಿಲಲ್ಲಿ, ಮುದ ನೀಡುವ ಮಾಗಿಕಾಲದ ದಿನಗಳಲ್ಲಿ ನಾದ-ನೃತ್ಯಗಳ ವೈವಿಧ್ಯಪೂರ್ಣ ಸುಮನೋಹರ ಕಾರ್ಯಕ್ರಮಗಳಿಂದ ಮನರಂಜಿಸಲಿರುವ ‘ನಿರಂತರಂ’ ಸಂಗೀತ- ನೃತ್ಯ ಸಂಸ್ಥೆಯ `ಸಂಗೀತ ಸಂಭ್ರಮ’ದ ವರ್ಣರಂಜಿತ ಕಾರ್ಯಕ್ರಮಗಳು ಬೆಂಗಳೂರಿನ ಜನತೆಗೆ ಸುಪರಿಚಿತ. ಸದಾ, ಮನಕಾನಂದ ನೀಡುವ ನವನೂತನ ಕಾರ್ಯಕ್ರಮಗಳನ್ನು ಆಯೋಜಿಸುವ `ಸಂಗೀತ ಸಂಭ್ರಮ’ ಸಂಸ್ಥೆಯ ನೇತೃತ್ವ ವಹಿಸಿರುವವರು ಪ್ರಖ್ಯಾತ ಸಂಗೀತ ವಿದುಷಿ ಡಾ. ಪುಸ್ತಕಂ ರಮಾ. ಸಮಾಜಮುಖಿ ಕಾರ್ಯಗಳಿಗೆ ಹೆಸರಾಗಿರುವ ಸ್ನೇಹಮಯಿ ವ್ಯಕ್ತಿತ್ವದ ಕರ್ನಾಟಕ ಕಲಾಶ್ರೀ ಡಾ. ರಮಾ ಸ್ಥಾಪಿಸಿ, ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ, `ಸಂಗೀತ ಸಂಭ್ರಮ’ ಸಂಸ್ಥೆಯು ಸಾರ್ಥಕ ಮೂರುದಶಕಗಳನ್ನು ಮೀರಿ ಕ್ರಮಿಸಿದ್ದು, ಕಳೆದ ಹದಿನೈದು ವರ್ಷಗಳಿಂದ, ಹಿರಿಯ ಹಾಗೂ ಉದಯೋನ್ಮುಖ ಕಲಾವಿದರಿಗೆ ನಿರಂತರವಾಗಿ ವೇದಿಕೆಯನ್ನು ಒದಗಿಸುತ್ತ ಬಂದಿರುವುದು ಸಂಗೀತ ಕಲಾವಿದೆ ರಮಾ ಅವರ ಅಸ್ಮಿತೆ. ಪ್ರತಿವರ್ಷ ತಪ್ಪದೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಈ ‘ನಿರಂತರಂ’ ಸಂಗೀತ-ನೃತ್ಯೋತ್ಸವವು ದಿನೇ ದಿನೇ ಜನಪ್ರಿಯತೆಯನ್ನು ಪಡೆಯುತ್ತಿರುವುದು ಸಂತಸದ ಸಂಗತಿ.



ಎಂದಿನಂತೆ ಈ ಬಾರಿಯೂ ಹೊಸವರ್ಷದ ಜನವರಿಯ ಮೊದಲ ದಿನದಿಂದಲೇ ದಿನಾಂಕ 01 ಜನವರಿ 2026ರ ಗುರುವಾರದಿಂದ 04 ಜನವರಿ 2026ರ ಭಾನುವಾರದವರೆಗೂ ನಾಲ್ಕು ದಿನಗಳ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


01 ಜನವರಿ 2026ರಂದು ಸಂಜೆ 5-00 ಗಂಟೆಗೆ ಉದ್ಘಾಟನೆ – ಶ್ರೀ ಚಿರಂಜೀವಿ ಸಿಂಗ್ – ಐ.ಎ.ಎಸ್. (ಕರ್ನಾಟಕ ಸರ್ಕಾರದ ನಿವೃತ್ತ ಅಡಿಷನಲ್ ಚೀಫ್ ಸೆಕ್ರೆಟರಿ) ಅನಂತರ- ಸಂಗೀತ ಸಂಭ್ರಮದ ಕಲಾವಿದರಿಂದ ಸಮೂಹ ಗೀತೆಗಳು. ವಿದ್ವಾನ್ ರಾಜ್ಯಶ್ರೀ ಜೋಸ್ಯರ್ ಶ್ರೀಕಾಂತ್ ಕರ್ನಾಟಕ ಸಂಗೀತ, ಅಮೆರಿಕೆಯ ಕುಮಾರಿ ಶ್ರೇಯಾ ಶ್ರೀರಾಮ್ ಇವರಿಂದ ಭರತನಾಟ್ಯ. ಅನಂತರ- ಕರೋಕೆ – ಸಿನಿಮಾ ಜನಪ್ರಿಯ ಹಾಡುಗಳು- ವಿದುಷಿ ದೀಪ್ತಿ ಶ್ರೀನಾಥ್, ಕುಮಾರಿ ಸಾಕ್ಷಿ ಜಗನ್ನಾಥ್ ಮತ್ತು ವಿದ್ವಾನ್ ಭಾರ್ಗವ್ ಹೆಚ್.ಸಿ. ನಂತರ- ಮೈಸೂರಿನ ಡಾ. ಕೃಪಾ ಫಡ್ಕೆ ಮತ್ತು ತಂಡದವರಿಂದ ‘ಗೀತಾಮೃತಧುಹೆ ನಮಃ’ ನೃತ್ಯ ನಾಟಕ.



02 ಜನವರಿ 2026ರಂದು ಸಂಜೆ 5-00 ಗಂಟೆಗೆ ಸಂಗೀತ ಸಂಭ್ರಮದ ಕಲಾವಿದರಿಂದ ಸಮೂಹ ಗೀತೆಗಳು. ಕರ್ನಾಟಕ ಸಂಗೀತ ವಿದುಷಿ ಹರಿಣಿ ಶ್ರೀಧರ್, ಶ್ರೀ ಸುಜಯ್ ಶಾನುಭಾಗ್ – ಕಲರ್ಸ್ ಆಫ್ ಭಕ್ತಿ – ಪಾಂಡುರಂಗ ಭಕ್ತರ ಕುರಿತು ಏಕವ್ಯಕ್ತಿ ಪ್ರದರ್ಶನ. ಅಮೇರಿಕೆಯ ಕುಮಾರಿ ಶಿಲ್ಪ ಸೇತುರಾಮನ್, ಶ್ರೀಮತಿ ಪ್ರೀತಿ ಪ್ರಸಾದ್ -ಭರತನಾಟ್ಯ.



03 ಜನವರಿ 2026ರಂದು ಬೆಳಗ್ಗೆ 9-30 ಗಂಟೆಗೆ ಸಂಗೀತ ಸಂಭ್ರಮದ ಕಲಾವಿದರಿಂದ ಸಮೂಹ ಗೀತೆಗಳು. ಕರ್ನಾಟಕ ಶಾಸ್ತ್ರೀಯ ಸಂಗೀತ- ವಿದುಷಿ ವಿಭಾ ರವೀಂದ್ರ ಮತ್ತು ವಿದುಷಿ ಪಲ್ಲವಿ ರಂಗಿನೀದಿ, ಭರತನಾಟ್ಯ- ಕುಮಾರಿ ದಿಶಾ ಯೂ., ಶ್ರೀಮತಿ ಸುಕನ್ಯ ರಾಘವ್ ಮತ್ತು ಶ್ರೀಮತಿ ಸುಪ್ರಿಯಾ ಅಶ್ವಿನ್, ಭರತನಾಟ್ಯ- ಕುಮಾರಿ ಪೂರ್ಣಾ ಪವಾರ್ ಮತ್ತು ಶ್ರೀ ಗೌರೀ ನೃತ್ಯಾಲಯ
ಸಂಜೆ 5-00 ಗಂಟೆಗೆ ಸಂಗೀತ ಸಂಭ್ರಮದ ಕಲಾವಿದರಿಂದ ಸಮೂಹ ಗೀತೆಗಳು. ಭರತನಾಟ್ಯ- ಅಭ್ಯುದಯ ಧ್ಯಾನ್ ಭೂಷಣ್, ಅಭಿಜ್ಞಾನ್ ವೇದಾಂತ್ ಭೂಷಣ್, ಅಮೇರಿಕೆಯ ಶ್ರುತಿಲಯ ಸ್ಕೂಲ್ ಆಫ್ ಡ್ಯಾನ್ಸ್, ಅಮೇರಿಕೆಯ ಪವಿತ್ರ ದಂಟು ಮತ್ತು ಡಾ. ರಕ್ಷಾ ಕಾರ್ತೀಕ್ – ತ್ಯಾಗರಾಜ ವೈಭವಂ ನೃತ್ಯರೂಪಕ
ಸ್ಥಳ: ಸೇವಾಸದನ, ಮಲ್ಲೇಶ್ವರ, ಬೆಂಗಳೂರು.



04 ಜನವರಿ 2026ರಂದು ಭಾನುವಾರ ಸಂಜೆ 3-30 ವೇದಿಕ್ ಪ್ರಾರ್ಥನೆ, 5-00 ಗಂಟೆಗೆ ’ಸಂಭ್ರಮ ಪುರಸ್ಕಾರ’ – ಪ್ರಶಸ್ತಿ ಪುರಸ್ಕೃತರು – ಶ್ರೀಮತಿ ವಸಂತ ಮಾಧವಿ, ಪ್ರಕಾಶ್ ಬೆಳವಾಡಿ, ವೇಲು ಲಹರಿ, ದಾ. ಎ.ವಿ. ಪ್ರಸನ್ನ, ಪದ್ಮಿನಿ ರವಿ, ಹೆಚ್.ಎನ್. ಸುರೇಶ, ಎ.ವಿ. ಸತ್ಯನಾರಾಯಣ, ಡಾ. ಎನ್. ಸತ್ಯಪ್ರಕಾಶ್, ಡಾ. ಸಿಂಧೂರಿ ಜಯಸಿಂಘೆ, ಮಧುಶ್ರೀ ಸೇತುರಾಮನ್, ನೀಲಾ ರಾಮಾನುಜ, ಎಸ್.ವಿ. ಗಿರಿಧರ್, ಪಿ. ಜನಾರ್ದನ್ ರಾವ್, ಜಯರಾಂ ಕಿಕ್ಕೇರಿ ಮತ್ತು ಎಂ.ಎ. ಶ್ರೀಕೃಷ್ಣನ್ .


ಮುಖ್ಯ ಅತಿಥಿಗಳು – ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್ ಸ್ವಾಮಿ, ಡಾ. ಸಿ.ಎನ್. ಅಶ್ವಥ್ ನಾರಾಯಣ್ – ಶಾಸಕರು, ನಾಗಾಭರಣ, ಡಾ. ನಾಗಮಣಿ ಶ್ರೀನಾಥ್, ರೇವತಿ ಕಾಮತ್ ಮತ್ತು ಜಯಶ್ರೀ -ಕೂನ್ತುಲ್ಲಿ.
ಫ್ಯೂಶನ್ ಮ್ಯೂಜಿಕ್ – ಸಂಗಮ ಸಂಭ್ರಮ- ಟಿಕೆಟ್ ಮೂಲಕ ಪ್ರವೇಶ.
ಸ್ಥಳ: ಚೌಡಯ್ಯ ಮೆಮೋರಿಯಲ್ ಹಾಲ್, ವಯ್ಯಾಲಿಕಾವಲ್, ಬೆಂಗಳೂರು. ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.




*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

