ಧಾರವಾಡ : ಸಾಹಿತ್ಯ ಗಂಗಾ ಸಂಸ್ಥೆಯು ಹಿರಿಯ ಲೇಖಕಿ ದಿ. ಸುನಂದಾ ಬೆಳಗಾಂವಕರ ಇವರ ಸ್ಮರಣಾರ್ಥ ಕೊಡಮಾಡುವ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿಗೆ 2025ರಲ್ಲಿ ಪ್ರಕಟವಾದ ಕಾದಂಬರಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು ರೂ.10,000/- ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಆಸಕ್ತ ಲೇಖಕ/ಕಿಯರು ನಿಯಮಾನುಸಾರವಾಗಿ ಕಾದಂಬರಿಗಳನ್ನು ಕಳುಹಿಸಬಹುದು.
ನಿಯಮಗಳು :
* 01-01-2025ರಿಂದ 31-12-2025ರವರೆಗೆ ಪ್ರಕಟವಾದ ಸ್ವತಂತ್ರ ಕಾದಂಬರಿಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು.
* ಅನುವಾದ, ಅನುಸೃಷ್ಟಿ, ರೂಪಾಂತರ ಮತ್ತು ಪ್ರೇರಿತ ಕಾದಂಬರಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
* ಆಸಕ್ತ ಲೇಖಕ/ಕಿಯರು, ಪ್ರಕಾಶಕರು, ಹಿತೈಷಿಗಳು ಅಥವಾ ಓದುಗರು ಕಾದಂಬರಿ ಕಳುಹಿಸಬಹುದು.
* ನಿಗದಿತ ದಿನಾಂಕದೊಳಗೆ ಕಾದಂಬರಿಯ ಮೂರು ಪ್ರತಿಗಳು, ಪರಿಚಯ ಪತ್ರ ಮತ್ತು ಒಂದು ಫೋಟೋವನ್ನು ಕಳುಹಿಸಬೇಕು.
* ಕಾದಂಬರಿಯ ಗುಣಮಟ್ಟವೊಂದೇ ಪ್ರಶಸ್ತಿ ಆಯ್ಕೆಯ ಏಕೈಕ ಮಾನದಂಡವಾಗಿರುತ್ತದೆ.
* ಕಾದಂಬರಿಗಳನ್ನು ಕಳಿಸಲು ಕೊನೆಯ ದಿನಾಂಕ 31 ಜನವರಿ 2026.
* ಫಲಿತಾಂಶ ಪ್ರಕಟವಾಗುವ ದಿನಾಂಕ 01 ಎಪ್ರಿಲ್ 2026.
ನಮ್ಮ ವಿಳಾಸ : ವಿಕಾಸ ಹೊಸಮನಿ, 2ನೇ ಕ್ರಾಸ್, 2ನೇ ಮೇನ್, ದಾನೇಶ್ವರಿ ನಗರ, ಹಾವೇರಿ 581 110 (ಹಾವೇರಿ ಜಿಲ್ಲೆ)
ಮೊ. 9110687473
