ಬಂಟ್ವಾಳ : ಕಲಾನಿಕೇತನ ಡಾನ್ಸ್ ಫೌಂಡೇಷನ್ ಕಲ್ಲಡ್ಕ ಇವರು ಪ್ರಸ್ತುತ ಪಡಿಸುವ ‘ರಜತ ಕಲಾ ಯಾನ’ದ ಸರಣಿ ‘ಕಲಾ ಪರ್ವ 2025’ವನ್ನು ದಿನಾಂಕ 27 ಡಿಸೆಂಬರ್ 2025ರಂದು ಸಂಜೆ 3-30 ಗಂಟೆಗೆ ಬಂಟ್ವಾಳ ಬಿ.ಸಿ. ರೋಡಿನಲ್ಲಿರುವ ಸ್ಪರ್ಶ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಇವರು ದೀಪ ಪ್ರಜ್ವಲನೆ ಮಾಡಿ ಈ ಸರಣಿಯನ್ನು ಉದ್ಘಾಟನೆ ಮಾಡಲಿದ್ದು, ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರಸ್ತುತಿ ನಡೆಯಲಿದೆ. ನಟುವಾಂಗದಲ್ಲಿ ವಿದುಷಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣ ಆಚಾರ್ಯ ಮತ್ತು ವಿದುಷಿ ಶ್ರೀದೇವಿ ಕಲ್ಲಡ್ಕ, ಮೃದಂಗದಲ್ಲಿ ವಿದ್ವಾನ್ ಗಿತೇಶ್ ಎ.ಜಿ. ನೀಲೇಶ್ವರ ಹಾಗೂ ಕೊಳಲಿನಲ್ಲಿ ಎ.ಎಸ್. ಹರಿಪ್ರಸಾದ್ ನೀಲೇಶ್ವರಂ ಸಹಕರಿಸಲಿದ್ದಾರೆ.

