ಚಿಕ್ಕಬಳ್ಳಾಪುರ : ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆ ‘ರಂಗಕಹಳೆ’ ಬೆಂಗಳೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ‘24ನೇ ಕುವೆಂಪು ನಾಟಕೋತ್ಸವ 2025’ವನ್ನು ದಿನಾಂಕ 27, 28 ಮತ್ತು 29 ಡಿಸೆಂಬರ್ 2025ರಂದು ಪ್ರತಿದಿನ ಸಂಜೆ 6-00 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 27 ಡಿಸೆಂಬರ್ 2025ರಂದು ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮತ್ತು ‘ಮೋಡಣ್ಣನ ತಮ್ಮ’ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 28 ಡಿಸೆಂಬರ್ 2025ರಂದು ಬಾಲಕ ಕುವೆಂಪು ಕಿರುಚಿತ್ರ ಪ್ರದರ್ಶನ ಹಾಗೂ ‘ಸ್ಮಶಾನ ಕುರುಕ್ಷೇತ್ರ’ ಮತ್ತು ‘ಯಮನ ಸೋಲು’ ನಾಟಕ ಪ್ರಸ್ತುತಗೊಳ್ಳಲಿದೆ. ದಿನಾಂಕ 29 ಡಿಸೆಂಬರ್ 2025ರಂದು ಶ್ರೀ ಕುವೆಂಪು ನೃತ್ಯ ನಮನ, ಶ್ರೀ ಕುವೆಂಪು ಗೀತೆ ಗಾಯನ ಮತ್ತು ಶೂದ್ರ ತಪಸ್ವಿ ನಾಟಕ ಪ್ರದರ್ಶನ ನಡೆಯಲಿದೆ.

