ಮಂಗಳೂರು : ಕಲಾವಿದ ಪ್ರವೀಣ್ ಕುಮಾರ್ ಅವರ ಕುಂಚದಿಂದ ಮೈಸೂರು ಮತ್ತು ತಾಂಜಾವೂರು ಶೈಲಿಯಲ್ಲಿ ಹೊರಹೊಮ್ಮಿರುವ ಕಲಾಕೃತಿಗಳ ‘ವರ್ಣ ಬೆಳದಿಂಗಳು’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 02ರಿಂದ 05 ಜನವರಿ 2025ರವರೆಗೆ ಆಯೋಜಿಸಲಾಗಿದೆ.
ದಿನಾಂಕ 02 ಜನವರಿ 2025ರಂದು ಸಂಜೆ ಗಂಟೆ 5-30ಕ್ಕೆ ದೃಢವ್ರತ ಗೊರಿಕ್ರವರು ಪ್ರದರ್ಶನ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಸಮೀರ್ ಪುರಾಣಿಕ್ ಭಾಗವಹಿಸಲಿದ್ದು, ಅಸ್ಟ್ರೋ ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ಕಲಾ ತರಬೇತಿ ಪಡೆದಿರುವ ಪಿ. ಪ್ರವೀಣ್ ಕುಮಾರ್ ಇವರು ಕಳೆದ 24 ವರ್ಷಗಳಿಂದ ಸುಮಾರು 4,000ಕ್ಕೂ ಅಧಿಕ ಚಿತ್ರಕಲೆಗಳನ್ನು ರಚಿಸಿದ್ದಾರೆ. ಸುಮಾರು 15ರಷ್ಟು ಕಲಾಕೃತಿಗಳು ಪ್ರದರ್ಶನಗೊಳ್ಳಲಿದೆ. ದೇವರುಗಳ ಕಲಾತ್ಮಕ ಚಿತ್ರಣಗಳನ್ನು ಚಿನ್ನದ ತಗಡಿನ ಎಂಬೋಸ್ನ ಮೂಲಕ ರಚಿಸಲ್ಪಟ್ಟ ರೂ.20 ಸಾವಿರದಿಂದ ರೂ.80 ಸಾವಿರ ವರೆಗಿನ ಚಿತ್ರಕಲೆಗಳು ಪ್ರದರ್ಶನದಲ್ಲಿ ಲಭ್ಯವಿರಲಿವೆ ಎಂದು ಕಲಾವಿದ ದಿನೇಶ್ ಹೊಳ್ಳ ತಿಳಿಸಿದ್ದಾರೆ. ದಿನಾಂಕ 03ರಿಂದ 05 ಜನವರಿ 2025ರವರೆಗೆ ಬೆಳಗ್ಗೆ 10-00ರಿಂದ 7-00 ಗಂಟೆಗೆ ತನಕ ಚಿತ್ರ ಪ್ರದರ್ಶನ ನಡೆಯಲಿದೆ.

