ಕಾಸರಗೋಡು : ಇತಿಹಾಸ, ಸಂಸ್ಕೃತಿ, ಸಮಾಜದ ಬಗ್ಗೆ ಅಧ್ಯಯನ ನಡೆಸುತ್ತಾ ಕಾಸರಗೋಡಿಗಾಗಮಿಸಿದ ಶ್ರೀಲಂಕಾದ ಆರು ಮಂದಿ ಮಾಧ್ಯಮ ತಜ್ಞರಿಗೆ ಅವರ ಸಾಧನೆಗಳನ್ನು ಗುರುತಿಸಿ ದಿನಾಂಕ 28 ಡಿಸೆಂಬರ್ 2025ರಂದು ಕಾಸರಗೋಡು ಕನ್ನಡ ಭವನದ ‘ಕನ್ನಡ ಪಯಸ್ವಿನಿ ಪ್ರಶಸ್ತಿ’ ನೀಡಲಾಯಿತು. ಕನ್ನಡ ಭವನ ಗ್ರಂಥಾಲಯದ ಸಂಸ್ಥಾಪಕ ವಾಮನ ರಾವ್ ಬೇಕಲ್ ಮತ್ತು ನಿರ್ದೇಶಕಿ ಸಂಧ್ಯಾರಾಣಿ ಟೀಚರ್ ಪ್ರಶಸ್ತಿ ಪ್ರದಾನ ಮಾಡಿದರು.
ಶ್ರೀಲಂಕಾ ಸರಕಾರದ ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಇಲಾಖೆ, ಅಲ್ಲಿನ ಕೇಂದ್ರ ಸಚಿವರುಗಳ ಮಾಧ್ಯಮ ಕಾರ್ಯದರ್ಶಿಗಳು ಪ್ರಶಸ್ತಿ ಸ್ವೀಕರಿಸಿದರು. ಸರ್ವಶ್ರೀಗಳಾದ ಪಾಟುಮ್ ಪಾಸ್ಕಲ್, ನಿಶಾಂತಾ ಅಲ್ವಿಸ್, ಸಂಜೀವ್ ತಿಸೇರಾ, ಹೇಮಂತ ಕುಮಾರಸಿಂಗೆ, ತುಷಾರ ಹೆಚ್ಚಿಯಾಚಿ, ಧಾಮಿಶ್ ಅಜಿತ್ ಶ್ರೀಲಂಕಾದ ತಂಡದಲ್ಲಿದ್ದವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎ.ಆರ್. ಸುಬ್ಬಯಕಟ್ಟೆ, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಕಾರ್ಯದರ್ಶಿ ಗಂಗಾಧರ ತೆಕ್ಕೇಮೂಲೆ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಮಾಜಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ ಮೊದಲಾದವರು ಉಪಸ್ಥಿತಿರಿದ್ದರು.
