ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ದಿನಾಂಕ 03 ಜನವರಿ 2026ರಂದು ಅಕಾಡೆಮಿ ಸಭಾಂಗಣದಲ್ಲಿ ಸಂಜೆ 4-00 ಗಂಟೆಗೆ ‘ಕಾವ್ಯಾಂ ವ್ಹಾಳೊ- 10’ ಶೀರ್ಷಿಕೆಯಡಿ ಕವಿಗೋಷ್ಠಿಯನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಿಕೊಳ್ಳಲಿದ್ದು, ‘ಸಾಮರಸ್ಯ’ ಮಂಗಳೂರು ಇದರ ಅಧ್ಯಕ್ಷರಾದ ಮಂಜುಳಾ ನಾಯಕ್ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕೊಂಕಣಿ ಸಾಮರಸ್ಯದ ಪುಸ್ತಕಗಳನ್ನು ಹಾಗೂ ಸಂಗೀತದ ಕ್ಯಾಸೆಟ್ಗಳನ್ನು ಹಲವಾರು ವರ್ಷಗಳಿಂದ ಊರಿಂದೂರಿಗೆ ಹಬ್ಬ- ಹರಿದಿನಗಳಲ್ಲಿ ಕೊಂಡು ಹೋಗಿ ಮಾರಿ, ಸಾಹಿತ್ಯ ಸೇವೆಯನ್ನು ಮಾಡುತ್ತಿರುವ ಆಲ್ವಿನ್ ಸಿಕ್ವೇರಾ (ಮೆಲೋಡಿ ಮಾಸ್ಟರ್) ಇವರನ್ನು ಸನ್ಮಾನಿಸಲಾಗುವುದು. ಖ್ಯಾತ ಕವಿಗಳಾದ ಶ್ರೀ ಅರವಿಂದ ಶ್ಯಾನಭಾಗ್ರವರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಮರ್ಲಿನ್ ಮಸ್ಕರೇನ್ಹಸ್, ನವೀನ್ ಕುಲ್ಶೇಕರ್, ವಾಯ್ಲೆಟ್ ಪಿರೇರಾ, ಸುಮಾ ವಸಂತ್, ರಿಚ್ಚರ್ಡ್ ಪಿರೇರಾ, ಪ್ರೀತಾ ಮಿರಾಂದಾ, ಸ್ಟ್ಯಾನಿಸ್ಲಸ್ ಡಿಸೋಜ, ರಮಾನಾಥ ಮೇಸ್ತ, ಅರುಣ್ ದಾಂತಿ ಹಾಗೂ ಸಪ್ನಾ ಮೇ ಕ್ರಾಸ್ತಾ ಇವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
