ರಾಯಚೂರು : ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ ‘ಮಹಿಳಾ ಪರಿಷತ್’ ಇದರ ಉದ್ಘಾಟನಾ ಕಾರ್ಯಕ್ರಮ, ಪದಗ್ರಹಣ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 04 ಜನವರಿ 2026ರಂದು ರಾಯಚೂರು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಂಜಾನೆ 10-00 ಗಂಟೆಗೆ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸರ್ವಮಂಗಳ ಸಂಕ್ರಿ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಕಾಯಕ ವಿಭೂಷಣ ಪ್ರಶಸ್ತಿ’ ಪ್ರದಾನ ಮಾಡಿ ಸನ್ಮಾನಿಸಲಾಗುವುದು. 2-30 ಗಂಟೆಗೆ ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಡಾ. ರಾಜಶ್ರೀ ಕಲ್ಲುರ್ಕರ್ ಇವರು ವಹಿಸಲಿದ್ದು, ಹಿರಿಯ ಸಾಹಿತಿ ವೀರ ಹನುಮನ ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ವೆಂಕಟೇಶ ಬಾಗಲವಾಡ ಇವರು ಆಶಯ ನುಡಿಗಳನ್ನಾಡಲಿದ್ದು, ದಾವಣಗೆರೆ ಅಕ್ಕ ಮಹಾದೇವಿ ಭಜನಾ ಮಂಡಳಿಯ ಶ್ರೀಮತಿ ಮಹಾದೇವಿ ಹೆಚ್., ಶ್ರೀಮತಿ ಎಂ. ಗೀತಾ ಮತ್ತು ಶ್ರೀಮತಿ ಭಾಮಾ ಇವರ ಗಾಯನ ಪ್ರಸ್ತುತಗೊಳ್ಳಲಿದೆ.

