ಬೆಂಗಳೂರು : ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ‘ಪಂಚಮ ಪದ’ ನಾಟಕ ಪ್ರದರ್ಶನವನ್ನು ದಿನಾಂಕ 02 ಜನವರಿ 2025ರಂದು ಸಂಜೆ ಗಂಟೆ 7-30ಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ವೆಂಕಟಗಿರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಚಂದ್ರಶೇಖರ್ ಕೆ. ಇವರ ನಿರ್ದೇಶನದಲ್ಲಿ ಹೋರಾಟದ ಹಾಡುಗಳು ಮತ್ತು ಕಥನ ಪ್ರಸ್ತುತಿ.
ಕರ್ನಾಟಕದಲ್ಲಿ ಹೋರಾಟದ ಹಾಡುಗಳ ದೊಡ್ಡ ಪರಂಪರೆಯೇ ಇದೆ. ಆ ಹಾಡುಗಳೊಂದಿಗೆ ಇಲ್ಲಿನ ಹಲವು ಜನ ಸಮುದಾಯಗಳ ಸಂಸ್ಕೃತಿ, ಬದುಕು, ಬವಣೆ, ಚಳುವಳಿಯ ನೆನಪುಗಳು ಬೆಸೆದುಕೊಂಡಿವೆ. ಇಂತಹ ಹತ್ತಾರು ಹಾಡುಗಳ ಹುಟ್ಟಿನ ಸುತ್ತಲಿನ ಕಥನಗಳನ್ನು ನಾವು ಬಗೆಯುತ್ತಾ ಹೋದಂತೆ ಈ ನೆಲದ ಸಾಂಸ್ಕೃತಿಕ ಇತಿಹಾಸದ ಭಿನ್ನ ಮಗ್ಗುಲುಗಳು ತೆರೆದುಕೊಳ್ಳುತ್ತವೆ. ಪ್ರಸ್ತುತ ಪ್ರಯೋಗ ಹಾಡು, ನೆನಪು, ಮರೆತ ಇತಿಹಾಸವನ್ನು ವಿಶಿಷ್ಟ ನೇಯ್ಗೆಯಲ್ಲಿ ಬೆಸೆದು ಕಟ್ಟಿರುವ ಸಂಗೀತ ಪ್ರಯೋಗ. ಇದು ಹೀಗೆ ಮುಂದೆ ಆಗಲಿರುವ ಹಲವು ಪ್ರಯೋಗಗಳ ಸರಣಿಯ ಆರಂಭ ಬಿಂದು.

