ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ದಿನಾಂಕ 14 ಫೆಬ್ರವರಿ 2026ರಂದು ಜರಗುವ ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಓರ್ವ ಮಹಿಳಾ ಸಾಧಕರಿಗೆ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಮತ್ತು ಓರ್ವ ಮಹಿಳಾ ಸಾಧಕರಿಗೆ ‘ವೀರರಾಣಿ ಅಬ್ಬಕ್ಕ ಪುರಸ್ಕಾರ’ಗಳನ್ನು ನೀಡಲು ನಿರ್ಧರಿಸಲಾಗಿದೆ. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗಳು ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.
ವೀರರಾಣಿ ಅಬ್ಬಕ್ಕ ಪ್ರಶಸ್ತಿ : ತುಳುನಾಡಿನಲ್ಲಿ ಹುಟ್ಟಿ ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನಾ ವಿಭಾಗಗಳಲ್ಲಿ ಗಣನೀಯ ಸಾಧನೆ ಮಾಡಿದ ಓರ್ವ ಮಹಿಳೆಗೆ ಈ ಪ್ರಶಸ್ತಿ ಮೀಸಲಾಗಿದೆ. ನಾಡು, ನುಡಿ ಹಾಗೂ ಪರಂಪರೆಗೆ ನೀಡಿದ ಮಹತ್ವದ ಸೇವೆಯನ್ನು ಇಲ್ಲಿ ಗಮನಿಸಲಾಗುವುದು.
ವೀರರಾಣಿ ಅಬ್ಬಕ್ಕ ಪುರಸ್ಕಾರ : ತುಳು ಸಂಸ್ಕೃತಿಯ ಹಿನ್ನೆಲೆಯೊಂದಿಗೆ ಕಲೆ, ಕ್ರೀಡೆ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ಮಹಿಳೆಯೋರ್ವರಿಗೆ ಅಬ್ಬಕ್ಕ ಪುರಸ್ಕಾರ ನೀಡಲು ಉದ್ದೇಶಿಸಲಾಗಿದೆ. ಚಲನಚಿತ್ರ, ನಾಟಕ, ಲಲಿತ ಕಲೆಗಳು, ಕ್ರೀಡಾರಂಗ, ನಾಟಿವೈದ್ಯ, ಜಾನಪದ ಪ್ರಕಾರಗಳಲ್ಲಿರುವ ಪರಿಶ್ರಮಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಅರ್ಹತೆ ಹೊಂದಿದವರು ಅಥವಾ ಅವರ ಬಗ್ಗೆ ತಿಳಿದವರು ದಿನಾಂಕ 15 ಜನವರಿ 2026ರೊಳಗೆ ಈ ಕೆಳಗಿನ ವಿಳಾಸಕ್ಕೆ ಮಾಹಿತಿ ನೀಡಲು ಕೋರಲಾಗಿದೆ. (ಈ ಹಿಂದೆ ಪ್ರಶಸ್ತಿಗಾಗಿ ವಿವರಗಳನ್ನು ಕಳುಹಿಸಿಕೊಟ್ಟವರು ಪುನ: ಕಳುಹಿಸಿಕೊಡುವ ಅವಶ್ಯಕತೆಯಿರುವುದಿಲ್ಲ)
ಸಂಪರ್ಕ ವಿಳಾಸ: ದಿನಕರ ಉಳ್ಳಾಲ್, ಅಧ್ಯಕ್ಷರು, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ, ಅಪ್ಪಯ್ಯ ಮೆನ್ಷನ್, ಪೆರ್ಮನ್ನೂರು ಅಂಚೆ, ಮಂಗಳೂರು – 575017, ದ. ಕ. ಜಿಲ್ಲೆ ಮೊಬೈಲ್ : 98800 88333 / 93433 43888, ಇಮೇಲ್ : [email protected]
