ಹೊಸಕೋಟೆ: ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ, ಪ್ರತಿ ತಿಂಗಳ ಎರಡನೇ ಶನಿವಾರದಂದು ಸಂಜೆ ಆಯೋಜಿಸುವ ನಾಟಕ ಸರಣಿ ರಂಗ ಮಾಲೆ -70 ದಿನಾಂಕ 13-05-2023 ರಂದು ನಡೆಯಿತು . ಈ ಬಾರಿ ಬೆಂಗಳೂರು ಬಿಂಕ ಬಿನ್ನಾಣಿಗರು ರಂಗ ತಂಡವು ಸಂಸ್ಕೃತದ ಮಹಾ ಕವಿ ಭಾಸ ನ “ದೂತ ಘಟೋತ್ಕಜ ” ನಾಟಕವನ್ನು ಯುವ ನಿರ್ದೇಶಕ ಶಿವು ಹೊನ್ನಿಗನಹಳ್ಳಿ ನಿರ್ದೇಶನದಲ್ಲಿ ಪ್ರದರ್ಶಿಸಿತು. ನಾಟಕ ಉದ್ಘಾಟನೆ ಮಾಡಿದ ವೇದಿಕೆ ಅಧ್ಯಕ್ಷ ಕೆ.ವಿ ವೆಂಕಟರಮಣಪ್ಪ, ಪಾಪಣ್ಣ ಕಾಟಂ ನಲ್ಲೂರು ಮಾತನಾಡುತ್ತಾ ‘ಭಾರತೀಯ ಮಹಾಕಾವ್ಯ ಮಹಾಭಾರತ . ವಿಶ್ವಕ್ಕೆ ಜೀವನ ಮೌಲ್ಯಗಳಾದ ‘ಭಾತೃತ್ವ- ಸಹ ಬಾಳ್ವೆ- ನ್ಯಾಯ-ಧಮ೯ – ಶಾಂತಿ ಸಂದೇಶಗಳನ್ನು ನೀಡುತ್ತದೆ. ಪ್ರಭುತ್ವದಲ್ಲಿ ಯುದ್ಧ ಅದರ ನಶ್ವರತೆ – ನಿರರ್ಥಕತೆಯನ್ನು ಸಾರುತ್ತಲೆ ಬಂದಿದೆ ಎಂದರು’.ನಾಟಕ ನೆರೆದ ಪ್ರೇಕ್ಷಕರನ್ನು ಮೋಡಿ ಮಾಡಿತು. ನಿರ್ದೇಶಕ ಶಿವು ಹೊನ್ನಿಗನಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆ ಪದಾಧಿಕಾರಿಗಳಾದ ‘ಜಗದೀಶ್ ಕೆಂಗನಾಳ್ . ಸಿದ್ದೇಶ್ವರ ದೊಡ್ಡ ಬನಹಳ್ಳಿ. ಎಂ.ಸುರೇಶ್ ಚಲಪತಿ ಮಮತ, ಮುನಿರಾಜು ಇತರರು ಹಾಜರಿದ್ದರು.