ಬೆಳಗಾವಿ : ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ (ರಿ.) ಇದರ ವತಿಯಿಂದ ಪ್ರತಿವರ್ಷ ನೀಡುವ ‘ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ಗೆ 2025ನೇ ಸಾಲಿಗೆ ಎರಡು ಕೃತಿಗಳು ಪುರಸ್ಕೃತಗೊಂಡಿದ್ದು, ಬೆಳಗಾವಿಯ ಶ್ರೀಮತಿ ಜ್ಯೋತಿ ಬದಾಮಿ ಇವರ ‘ಋಣಿ’ ಮತ್ತು ಡಾ. ಸುನೀಲ ಪರೀಟ ಇವರ ‘ಬಹುದೊಡ್ಡ ಪ್ರಶ್ನೆ’ ಕೃತಿಗಳು ಆಯ್ಕೆಯಾಗಿದೆ. 2026ನೇ ಸಾಲಿನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ಪ್ರಧಾನವನ್ನು ಮಾಡಲಾಗುವುದು ಮತ್ತು ತಮ್ಮ ಕೃತಿಗಳನ್ನು ಕಳುಹಿಸಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲ ಕವಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಪ್ರತಿಷ್ಠಾನದ ಅಧ್ಯಕ್ಷರು ಡಾ. ರಮೇಶ್ ಕರ್ಕಿ, ಡಾ ವಿಜಯಲಕ್ಷ್ಮಿ ಪುಟ್ಟಿ ಮತ್ತು ಕಾರ್ಯದರ್ಶಿ ಪ್ರೊ. ಗಿರೀಶ್ ಕರ್ಕಿ ತಿಳಿಸಿದ್ದಾರೆ.

