ಹಳೆಯಂಗಡಿ : ಜಿಲ್ಲಾ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿಯ ಯುವತಿ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ ಹಾಗೂ ಮಹಿಳಾ ಮಂಡಲ ಇವುಗಳ ಸಹಯೋಗದಲ್ಲಿ ‘ಭಜನಾ ಸ್ಪರ್ಧಾ ಸಂಭ್ರಮ-2026’ ಕಾರ್ಯಕ್ರಮವನ್ನು ದಿನಾಂಕ 11 ಜನವರಿ 2026ರಂದು ಬೆಳಿಗ್ಗೆ ಗಂಟೆ 9-30ಕ್ಕೆ ಹಳೆಯಂಗಡಿಯ ಯುವಕ ಮಂಡಲದ ಬೊಳ್ಳೂರು ವಾರಿಜ ವಾಸುದೇವ ಕಲಾವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ಸ್ಪರ್ಧೆಯನ್ನು ಪಡುಪಣಂಬೂರು ಹೊಯಿಗೆಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಳ ಆಡಳಿತ ಮೊಕ್ತೇಸರ ಎಚ್. ರಂಗನಾಥ ಭಟ್ ಇವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಪೂರ್ಣಮಾ ಯತೀಶ್ ರೈ ಸುರತ್ಕಲ್ ಇವರು ವಹಿಸಲಿದ್ದಾರೆ. ಸುರತ್ಕಲ್ ಗೋವಿಂದಾಸ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅಕ್ಷತಾ ವಿ. ಶೆಟ್ಟಿ ಸುರತ್ಕಲ್, ಯುವತಿ ಮಂಡಲದ ಸ್ಥಾಪಕ ಅಧ್ಯಕ್ಷೆ ಹಾಗೂ ಹಿರಿಯ ಮೋಹಿನಿ ಕಾಮೆರೊಟ್ಟು ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 10-00ರಿಂದ ಸಂಜೆ 4-00ರವರೆಗೆ ಭಜನಾ ಸ್ಪರ್ಧೆ ನಡೆಯಲಿದೆ.

